ಕೂಡುಮಂಗಳೂರು ಗ್ರಾ.ಪಂ ವಿಶೇಷ ಸಭೆ: ನಿವೇಶನ ರಹಿತರ ಪಟ್ಟಿ ಪರಿಶೀಲನೆ

ಕೂಡುಮಂಗಳೂರು ಗ್ರಾ.ಪಂ ವಿಶೇಷ ಸಭೆ: ನಿವೇಶನ ರಹಿತರ ಪಟ್ಟಿ ಪರಿಶೀಲನೆ

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ನಿವೇಶನ ರಹಿತರ ಪಟ್ಟಿಯನ್ನು ಪರಿಶೀಲನೆ ನಡೆಸುವ ದೃಷ್ಟಿಯಿಂದ ಕೂಡುಮಂಗಳೂರು ಗ್ರಾ.ಪಂ ನ ಉಪಾಧ್ಯಕ್ಷರಾದ ಶಶಿಕಲಾರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.

ಕೂಡುಮಂಗಳೂರು ಗ್ರಾ.ಪಂ ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ತಯಾರಿಸಿರುವ ಗ್ರಾ.ಪಂ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರ ಪಟ್ಟಿಯನ್ನು ಆಯಾ ವಾರ್ಡಿನ ಸದಸ್ಯರು ಪರಿಶೀಲಿಸಿದರು. ಪಟ್ಟಿಯಲ್ಲಿ ಅರ್ಹ ಫಲಾನುಭವಿಗಳ ಜೊತೆಗೆ ಅನರ್ಹರು ಕೂಡಾ ಇದ್ದ ಕಾರಣ, ನಿವೇಶನ ರಹಿತರ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲು ಸಮಯಾವಕಾಶ ನೀಡುವಂತೆ ಪಂಚಾಯಿತಿ ಸದಸ್ಯರು ಆಗ್ರಹಿಸಿದರು. ಪ್ರಸ್ತುತ ತಯಾರಾಗಿರುವ ಪಟ್ಟಿಯು ೨೦೧೭ ರ ಪಟ್ಟಿಯಾಗಿರುವ ಹಿನ್ನಲೆ ಹಾಲಿ ಪಟ್ಟಿಯ ಜೊತೆಗೆ ಹೊಸದಾಗಿ ಅರ್ಜಿ ಹಾಕಲು ಅವಕಾಶ ಕಲ್ಪಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಹಾಗೆಯೇ ಪಂಚಾಯಿತಿ ಸೂಚ್ಯಂಕದ ಬಗ್ಗೆ ಪಿಡಿಓ ಸಭೆಗೆ ಮಾಹಿತಿ ನೀಡಿದರು. ಗ್ರಾ.ಪಂ ವ್ಯಾಪ್ತಿಯ ವಿವಿಧ ಇಲಾಖೆಗಳಿಂದ ಲಭಿಸಿದ ಮಾಹಿತಿಯನ್ನು ಸಭೆಗೆ ತಿಳಿಸಿ, ಸಭೆಯ ಅನುಮೋದನೆ ಪಡೆಯಲಾಯಿತು. ಈ ಸಂದರ್ಭ ಕೂಡುಮಂಗಳೂರು ಗ್ರಾ.ಪಂ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು.