ಕುಂಜಿ-ಕಕ್ಕಬ್ಬೆ ಗ್ರಾಮ ಪಂಚಾಯತಿಯ ಎನ್.ಆರ್ ಎಲ್.ಎಂ ನೂತನ ಕಟ್ಟಡ ಉದ್ಘಾಟನೆ
ನಾಪೋಕ್ಲು:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕುಂಜಿಲ -ಕಕ್ಕಬೆ ಗ್ರಾಮ ಪಂಚಾಯತ್ ನ ಎನ್ ಆರ್ ಎಲ್ ಎಂ ನೂತನ ಕಟ್ಟಡವನ್ನು ಇಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಲೋಕಾರ್ಪಣೆಗೊಳಿಸಿದರು.
ಕಕ್ಕಬೆಯ ನೂತನ ಸುಸಜ್ಜಿತ ಗ್ರಾಮ ಪಂಚಾಯತ್ ಎನ್ ಆರ್ ಎಲ್ ಎಂ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು, ಗ್ರಾಮದ ಹಾಗೂ ಗ್ರಾಮಸ್ಥರ ಹಿತದೃಷ್ಟಿಯಿಂದ ಪಂಚಾಯತ್ ಆಡಳಿತ ಪಾರದರ್ಶಕವಾಗಿ ಹಾಗೂ ಜನಪರವಾಗಿ ಇರಬೇಕೆಂದು ಕರೆ ನೀಡಿದರು.
ಈ ಕಟ್ಟಡದಲ್ಲಿ ಲೈಬ್ರರಿ ವ್ಯವಸ್ಥೆ ಕಂಡು ಸಂತಸ ಗೊಂಡ ಶಾಸಕರು ಇದರ ಸದುಪಯೋಗ ಜನರಿಗೆ ಒದಗು ಅಂತಾಗಲಿ ಎಂದು ಕರೆ ನೀಡಿದರು. ನೂತನ ಪಂಚಾಯತ್ ಕಟ್ಟಡದಲ್ಲಿ ಗ್ರಾಮದ ಒಳಿತಿಗೆ ಶ್ರಮಿಸುವ ಬದ್ಧತೆ ಎಲ್ಲಾ ಪಂಚಾಯತ್ ಸದಸ್ಯರಿಗೆ ಇರಲಿ ಎಂದು ಸಲಹೆ ನೀಡಿದ ಮಾನ್ಯ ಶಾಸಕರು, ಗ್ರಾಮದ ಜನತೆಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ಪಣ ತೊಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ಯದುವೀರ್ ಒಡೆಯರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮಂದ್ರೀರ ಮೋಹನ್, ಕೆಡಿಪಿ ಸದಸ್ಯರು ಬಾಚಮಾಂಡ ಲವ ಚಿಣ್ಣಪ್ಪ, ತಾಲೂಕು ನಿರ್ವಹಣಾಧಿಕಾರಿ ಶೇಖರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬಾನಂಡ ಪ್ರತ್ಯು, ಪಂಚಾಯಿತಿ ಅಧ್ಯಕ್ಷರು ಪೊಂಗೇರ ಶಿಲ್ಪಾ ಲೋಕೇಶ್, ಉಪಾಧ್ಯಕ್ಷರು ಕಲಿಯಂಡ ಬೀನಾ ಸುಚಿತ್ರ, ಸದಸ್ಯರು ಕಲಿಯಂಡ ಸಂಪನ್ ಅಯ್ಯಪ್ಪ, ಪ್ರಕಾಶ್, ರಜಾಕ್, ಲೀಲಾವತಿ, ಬೊಪ್ಪಣ್ಣ, ಹರೀಶ್ ಮೊಣ್ಣಪ್ಪ, ಸಫಿಯ, ಶೈಲಾ, ಬಷೀರ್, ಭರತ್ ಚಂದ್ರ ದೇವಯ್ಯ, ರಾಶಿನ್, ಇಂದಿರಾ, ಅಶೋಕ್ ಕುಮಾರ್, ಪಕ್ಷದ ಪ್ರಮುಖರು ಚಿಣ್ಣಪ್ಪ, ಶೈಲಾ ಕುಟ್ಟಪ್ಪ, ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಸಿದ್ದು ನಾಚಪ್ಪ, ಉಪಸ್ಥಿತರಿದ್ದರು.