ಕುಶಾಲನಗರ:ಮಳೆಯಿಂದ ಮನೆ ಹಾಗೂ ಕೊಟ್ಟಿಗೆಗೆ ಹಾನಿ: ಸೂಕ್ತ ಪರಿಹಾರಕ್ಕೆ ಒತ್ತಾಯ

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರ ವಾರ್ಡ್ ನ ಬಸವೇಶ್ವರ ಬಡಾವಣೆ ಬಡಾವಣೆಯಲ್ಲಿ ಮಳೆಯಿಂದಾಗಿ ಕೊಟ್ಟಿಗೆ ಹಾಗೂ ಮನೆಗೆ ಹಾನಿಯಾದ ಘಟನೆ ನಡೆದಿದ್ದು, ಸ್ಥಳಕ್ಕೆ ಸ್ಥಳೀಯ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಸವೇಶ್ವರ ಬಡಾವಣೆ ನಿವಾಸಿ ಲೋಕೇಶ್ ಅವರ ಮನೆಯ ಕೊಟ್ಟಿಗೆ ಹಾಗೂ ಮನೆ ಮಳೆಯಿಂದಾಗಿ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ನಿರಂತರ ಮಳೆಯಿಂದ ದನದ ಕೊಟ್ಟಿಗೆ ಹಾನಿಯಾಗಿರುವುದರ ಜೊತೆಗೆ ಮನೆಯ ಗೋಡೆ ದೊಡ್ಡದಾಗಿ ಬಿರುಕು ಬಿಟ್ಡಿದೆ. ತುಂಬಾ ಹಳೆಯ ಗೋಡೆಯಾದ್ದರಿಂದ ಮನೆಯಲ್ಲಿ ವಾಸಿಸದಂತೆ ಪಂಚಾಯಿತಿಂದ ಸೂಚನೆ ನೀಡಲಾಗಿದೆ. ಕೊಟ್ಟಿಗೆ ಹಾಗೂ ಮನೆಯ ಗೋಡೆಗೆ ಹಾನಿಯಾಗಿರುವುದರಿಂದ ಕಂದಾಯ ಇಲಾಖೆ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಕೆ.ಬಿ.ಶಂಶುದ್ಧೀನ್ ಒತ್ತಾಯಿಸಿದರು. ಈ ಸಂದರ್ಭ ಸ್ಥಳೀಯರು ಇದ್ದರು.
What's Your Reaction?






