ಕುಶಾಲನಗರ: ಪ್ರೌಢಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

ಕುಶಾಲನಗರ: ತಾಲ್ಲೂಕು ಕೇಂದ್ರವಾದ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳೂ ಆದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು - ಈ ಬ್ಯಾಂಕ್ ನ ಹಿರಿಯ ನಿವೃತ್ತ ಅಧಿಕಾರಿಯೂ ಆದ ಕುಶಾಲನಗರದ ಸೂದನ ರತ್ನಾವತಿ ಪೂಣಚ್ಚ, ಉಚಿತ ಬರೆಯುವ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಿದರು.
ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಸೂದನ ರತ್ನಾವತಿ,ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೃಢ ಸಂಕಲ್ಪ ತೊಟ್ಟುಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆಸಿಕೊಂಡು ಶಿಕ್ಷಣ ನೀಡಿದ ಗುರುಗಳು ಹಾಗೂ ಜನ್ಮ ನೀಡಿದ ತಂದೆ- ತಾಯಿಗಳಿಗೆ ಗೌರವ ನೀಡಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕ ಪಿ.ನವೀನ್ ಕುಮಾರ್ ಮಾತನಾಡಿ , ಶಿಕ್ಷಣ ಪ್ರೇಮಿ ಸೂದನ ರತ್ನಾವತಿ ಅವರು ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ವಿತರಿಸುತ್ತಿದ್ದು, ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲೂ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ತಮ್ಮಲ್ಲಿರುವ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ. ಅವರ ಸೇವಾ ಕಾರ್ಯವು ಶ್ಲಾಘನೀಯವಾದುದು ಎಂದರು. ಶಾಲಾ ಶಿಕ್ಷಕರಾದ ಕೆ.ಟಿ.ರಶ್ಮಿ,ಎಸ್.ಎಸ್.ವೇಣುಗೋಪಾಲ್, ಎಂ.ತುಳಸಿ, ಎ.ಜೆ.ಚಂದ್ರಾವತಿ, ಅನಿತಾ, ಅಕ್ಷತಾ ಹಾಗೂ ಕಛೇರಿ ಸಿಬ್ಬಂದಿ ಕೆ.ಬಿ.ಲಕ್ಷ್ಮ್ ಇದ್ದರು.
What's Your Reaction?






