ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಮುದಾಯ ಸಹಭಾಗಿತ್ವದಲ್ಲಿ ಸಸ್ಯ ಶ್ಯಾಮಲ ಔಷಧಿಯ ಸಸ್ಯ ವನಕ್ಕೆ ಚಾಲನೆ: ಆರೋಗ್ಯಕರ ಜೀವನಶೈಲಿಗೆ ಔಷಧೀಯ ಸಸ್ಯಗಳು ಸಹಕಾರಿ: ಟಿ.ಜಿ.ಪ್ರೇಮಕುಮಾರ್

Jul 5, 2025 - 18:33
Jul 5, 2025 - 18:36
 0  27
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಮುದಾಯ ಸಹಭಾಗಿತ್ವದಲ್ಲಿ ಸಸ್ಯ ಶ್ಯಾಮಲ ಔಷಧಿಯ ಸಸ್ಯ ವನಕ್ಕೆ ಚಾಲನೆ: ಆರೋಗ್ಯಕರ ಜೀವನಶೈಲಿಗೆ ಔಷಧೀಯ ಸಸ್ಯಗಳು ಸಹಕಾರಿ: ಟಿ.ಜಿ.ಪ್ರೇಮಕುಮಾರ್

ಕುಶಾಲನಗರ: ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಎಸ್.ಡಿ.ಎಂ.ಸಿ., ಇಕೋ ಕ್ಲಬ್ ನ"ಗೋ ಗ್ರೀನ್ " ಅಭಿಯಾನದಡಿ ಎನ್.ಎಸ್.ಎಸ್.ಎಸ್., ಹಾಗೂ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಘಟಕದ ಸಂಯುಕ್ತಾಶ್ರಯದಲ್ಲಿ  ಕುಶಾಲನಗರ ಆರ್ಯವೈಶ್ಯ ಮಹಿಳಾ ಮಂಡಳಿಯ ಸಹಕಾರದೊಂದಿಗೆ ಮಂಡಳಿಯ 45 ನೇ ವಾರ್ಷಿಕೋತ್ಸವದ ಅಂಗವಾಗಿ 2024-25 ನೇ ಸಾಲಿನ‌ ಯೋಜನೆಯಡಿ ಸಮುದಾಯದ ಸಹಭಾಗಿತ್ವದಲ್ಲಿ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ನ ಸಹಯೋಗದೊಂದಿಗೆ ಶಾಲೆಯ ಅಂಗಳದಲ್ಲಿ "ಸಸ್ಯ ಶ್ಯಾಮಲ ಔಷಧೀಯ ಸಸ್ಯ ವನ"ದಲ್ಲಿ ವಿವಿಧ ಔಷಧಿ ಗುಣಗಳನ್ನು ಹೊಂದಿರುವ ಗಿಡಗಳನ್ನು ನೆಡುವ ಮೂಲಕ ಶಾಲಾ ಔಷಧಿ ವನದಲ್ಲಿ ಚಾಲನೆ ನೀಡಲಾಯಿತು.

 ಔಷಧೀಯ ವನದ ಪ್ರಾಮುಖ್ಯತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಔಷಧೀಯ ಗಿಡಗಳ ಮಹತ್ವದ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯ ಶಿಕ್ಷಕರೂ ಆದ‌ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ,ಔಷಧೀಯ ಸಸ್ಯಗಳು ಪರಿಸರ ವ್ಯವಸ್ಥೆಯ ಭಾಗವಾಗಿದೆ ಮತ್ತು ಅವುಗಳ ಸಂರಕ್ಷಣೆಯು ಪರಿಸರ ಸಂರಕ್ಷಣೆಗೆ ಉತ್ತಮ ಕೊಡುಗೆ ನೀಡುತ್ತವೆ ಎಂದರು.ಔಷಧೀಯ ಸಸ್ಯಗಳು ನಮ್ಮ ಆರೋಗ್ಯ ರಕ್ಷಣೆ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಔಷಧೀಯ ಗಿಡಗಳ ಪ್ರಯೋಜನಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ. ದಿಸೆಯಲ್ಲಿ ಈ ಔಷಧೀಯ ವನ ಸಹಕಾರಿಯಾಗಿವೆ ಎಂದರು. ಔಷಧೀಯ ವನವು ಅನೇಕ ಪ್ರಯೋಜನಗಳನ್ನು ಹೊಂದಿದೆ ಮತ್ತು ಆರೋಗ್ಯಕರ ಜೀವನಶೈಲಿಗೆ ಉತ್ತಮ ಕೊಡುಗೆ ನೀಡುತ್ತದೆ ಎಂದು ಪ್ರೇಮಕುಮಾರ್ ತಿಳಿಸಿದರು.

ಔಷಧೀಯ ವನದಲ್ಲಿ ಔಷಧೀಯ ಗಿಡ ನೆಡುವ ಮೂಲಕ ಚಾಲನೆ ನೀಡಿದ ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್ ಮಾತನಾಡಿ,ಮನೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವುದು ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಪ್ರಯೋಜನಕಾರಿಯಾಗಿದೆ .ಗಿಡಮೂಲಿಕೆಗಳು ಒತ್ತಡ, ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುವ ಮೂಲಕ ನಮ್ಮ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತವೆ ಎಂದರು.ಈ ಶಾಲೆಯಲ್ಲಿ ಪರಿಸರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಶ್ಲಾಘನೀಯವಾದುದು. ಈ ದಿಸೆಯಲ್ಲಿ ಈ ಶಾಲಾವರಣದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ಬೆಳೆಸಲು ತಮ್ಮ ಮಹಿಳಾ ಮಂಡಳಿಯು ಕೈಜೋಡಿಸಿದೆ. ವಿದ್ಯಾರ್ಥಿಗಳು ಔಷಧೀಯ ಗಿಡಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಔಷಧೀಯ ಸಸ್ಯಗಳ ಮಹತ್ವದ ಬಗ್ಗೆ ತಿಳಿಸಿದ ಶಾಲಾ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ,ಕೆಲವು ಔಷಧೀಯ ಸಸ್ಯಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್ , ದಿನನಿತ್ಯ ನಾವು ಬಳಸುವ ಔಷಧೀಯ ಸಸ್ಯಗಳ ಉಪಯೋಗದ ಬಗ್ಗೆ ತಿಳಿಸಿದರು.ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಕೆ.ಟಿ.ಸೌಮ್ಯ, ಔಷಧೀಯ ವನದ ಸಂರಕ್ಷಣೆ ಮತ್ತು ನಿರ್ವಹಣೆ ಬಗ್ಗೆ ತಿಳಿಸಿದರು.   ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ ,ಮಹಿಳಾ ಮಂಡಳಿಯ ಉಪಾಧ್ಯಕ್ಷೆ ವಾಣಿ ಮಹೇಶ್,  ಕಾರ್ಯದರ್ಶಿ ತ್ರಿವೇಣಿ ಪ್ರಸಾದ್ ,ಸಹ ಕಾರ್ಯದರ್ಶಿ,ಆರತಿ ಮಂಜುನಾಥ್ ,ಖಚಾಂಚಿ ಸುಮಾ ಶ್ಯಾಮ್ , ನಿರ್ದೇಶಕರಾದ ಲತಾ ರಮೇಶ್,ಅನಿತಾ ಅಶ್ವತ್,ಮಮತಾ ನಾಗೇಂದ್ರ, ಮೀರಾ ಪ್ರಸಾದ್ , ಸುಕನ್ಯ ಸುರೇಶ್, ಸಲಹಾ ಸಮಿತಿ ಸದಸ್ಯರಾದ ಆಶಾ ಅಶೋಕ್,ರೇಣುಕಾ ಜಯ ಚಂದ್ರ ,ಶಾಲಾ ಸಿಬ್ಬಂದಿ ಎಂ.ಉಷಾ ಇತರರು ಇದ್ದರು.

ಔಷಧೀಯ ವನದಲ್ಲಿ ಬೇವು, ತುಳಸಿ, ಶುಂಠಿ, ಅರಿಶಿಣ, ಲೋಳೆಸರ (ಅಲೋವೆರಾ), ಹಿಪ್ಪಲಿ, ಕಾಡು ಬಸಳೆ, ಉತ್ತರಾಣಿ, ಗರಿಕೆ, ಆಡುಸೋಗೆ ಹಾಗೂ  ಸೇರಿದಂತೆ ವಿವಿಧ ನಮೂನೆಯ ಔಷಧಿ ಸಸಿಗಳನ್ನು ನಾಟಿ ಮಾಡಲಾಯಿತು. ನಾಟಿ ಕಾರ್ಯದಲ್ಲಿ ಆರ್ಯ ವೈಶ್ಯಮಹಿಳಾ ಮಂಡಳಿಯ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ಔಷಧೀಯ ಗಿಡಗಳನ್ನು ನೆಟ್ಟರು.ನಂತರ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0