ಗರಗಂದೂರು ಮಲ್ಲಿಕಾರ್ಜುನ ಕಾಲೋನಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ

ಮಡಿಕೇರಿ:ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಂಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿ ಬೈರಿ ಅವರ ಮನೆಗೆ ಶಾಸಕರಾದ ಡಾ. ಮಂತರ್ ಗೌಡ ರವರು ಭೇಟಿ ನೀಡಿ ಪರಿಶೀಲಿಸಿ ಮನೆ ಮಂಜೂರು ಮಾಡಿ ಕೊಡುವಂತೆ ಪಂಚಾಯತಿ ಪಿ ಡಿ.ಓ ರವರಿಗೆ ಸೂಚನೆ ನೀಡಿದರು. ರೂ 5000 ಗಳನ್ನು ನೀಡಿ ತಾತ್ಕಾಲಿಕ ಶೆಡ್ ನಿರ್ಮಿಸಿವಂತೆ ಶಾಸಕರು. ಹೇಳಿದರು.ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭೋಜಮ್ಮ,ಉಪಾಧ್ಯಕ್ಷರಾದ ಎಂ.ಎ ಮುಸ್ತಫಾ, ಸದಸ್ಯರಾದ ಕೆ.ಎಸ್ ಅಬ್ದುಲ್ ಸಲಾಂ,ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಬಿ ಸತೀಶ್, ಹಾಗೂ ಗ್ರಾಮಸ್ಥರು ಹಾಜರಿದ್ದರು..