ಹಿರಿಯ ಜೀವ ಬೈರಿ ರವರ ಮನೆಗೆ ಶಾಸಕ ಡಾ.ಮಂತರ್ ಗೌಡ ಭೇಟಿ ಫಲಶ್ರುತಿ:ಒಂದೇ ದಿನದಲ್ಲಿ ರೆಡಿಯಾಯಿತು ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್

ಮಡಿಕೇರಿ:ಕಳೆದ ಎರಡು ದಿನಗಳ ಹಿಂದೆ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಹಿರಿಯ ಜೀವ ಬೈರಿ ರವರ ಶೋಚನೀಯ ಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿತ್ತು. ಶಾಸಕ ಡಾ.ಮಂತರ್ ಗೌಡ ರವರು ನೇರವಾಗಿ ಅಜ್ಜಿ ಬೈರಿ ರವರ ಮನೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಸಂದರ್ಭದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸಲು ಇವರ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಬೈರಿ ರವರಿಗೆ ಹಾಗೂ ಅವರ ಮಗನಿಗೆ ಚುನಾವಣೆ ವೋಟರ್ ಐಡಿ ಕಾರ್ಡ್ ದೊರಕಿದೆ. ಹಾಗೂ ಆಧಾರ್ ಕಾರ್ಡ್ ನೋಂದಣಿ ಆಗಿದೆ. ಸೋಮವಾರಪೇಟೆ ತಾಲ್ಲೂಕು ಆಡಳಿತ ಕಛೇರಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಲಾಯಿತು.ಸ್ವತಃ ಶಾಸಕರಾದ ಡಾ.ಮಂತರ್ ಗೌಡ ರವರು ಖುದ್ದಾಗಿ ಇಂದು ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಸೂಚನೆ ನೀಡಿದ್ದರು. ಈ ಸಂದರ್ಭದಲ್ಲಿ ಹರದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಲೀಂ, ಗ್ರಾಮಸ್ಥರಾದ ಅಬ್ಬಾಸ್, ಪೂವಪ್ಪ ರವರು ಉಪಸ್ಥಿತರಿದ್ದು ಸಹಕಾರ ನೀಡಿದರು.