ಮಡಿಕೇರಿ:ಈಡುಗಾಯಿ ಬಹಿರಂಗ ಹರಾಜು

ಮಡಿಕೇರಿ :-ನಗರದ ಕೋಟೆ ಶ್ರೀಗಣಪತಿ ದೇವಾಲಯದಲ್ಲಿ ಆಗಸ್ಟ್, 27 ರಂದು ಆಚರಿಸುತ್ತಿರುವ ಗಣೇಶೋತ್ಸವ ಹಬ್ಬದ ಪ್ರಯುಕ್ತ ಭಕ್ತಾಧಿಗಳು ಒಡೆದ ಈಡುಗಾಯಿಗಳನ್ನು ದೇವಾಲಯದ ವತಿಯಿಂದ ಸಾರ್ವಜನಿಕರ ಸಮ್ಮುಖದಲ್ಲಿ ಆಸಕ್ತ ಬಿಡ್ಡುದಾರರಿಂದ ಬಹಿರಂಗ ಹರಾಜು ನಡೆಸಲಾಗುವುದು. ಆದ್ದರಿಂದ ಆಗಸ್ಟ್, 12 ರಂದು ಬೆಳಗ್ಗೆ 10.30 ಗಂಟೆಗೆ ಓಂಕಾರೇಶ್ವರ ದೇವಾಲಯದ ಓಂಕಾರ ಸದನದಲ್ಲಿ ಸಾರ್ವಜನಿಕ ಆಸಕ್ತ ಬಿಡ್ಡುದಾರರು ಈಡುಗಾಯಿ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು. ಈಡುಗಾಯಿ ಬಹಿರಂಗ ಹರಾಜಿನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಸಕ್ತ ಬಿಡ್ಡುದಾರರು ರೂ.10 ಸಾವಿರ ಗಳ ಮೊತ್ತದ ಮುಂಗಡ ಠೇವಣಿ ಹಣವನ್ನು ಕಾರ್ಯನಿರ್ವಾಹಕ ಅಧಿಕಾರಿ, ಶ್ರೀ ಓಂಕಾರೇಶ್ವರ ದೇವಾಲಯ, ಮಡಿಕೇರಿ(ಎಕ್ಸಿಕ್ಯೂಟಿವ್ ಆಫಿಸರ್, ಶ್ರೀ ಓಂಕಾರೇಶ್ವರ ದೇವಸ್ಥಾನ, ಮಡಿಕೇರಿ) ಇವರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಡಿ.ಡಿ.ಮುಖಾಂತರ ಪಡೆದು, ಈಡುಗಾಯಿ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಎ.ಸಿ.ದೇವಯ್ಯ, ಅಧ್ಯಕ್ಷರು, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ, ಮೊ.9448899567 ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು ಅವರು ತಿಳಿಸಿದ್ದಾರೆ.