ಮಡಿಕೇರಿ:ಡಿ.17ರಿಂದ ಮೂರು ದಿನಗಳ ಕಾಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತದ 45ನೇ ಪ್ರಾಂತ ಸಮ್ಮೇಳನ
ಮಡಿಕೇರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತದ 45ನೇ ಪ್ರಾಂತ ಸಮ್ಮೇಳನ ಡಿ.17ರಿಂದ ಮೂರು ದಿನಗಳ ಕಾಲ ನಗರದ ಕೊಡಗು ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್ ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 9 ಸಂಘಟನಾತ್ಮಕ ವಿಭಾಗಗಳಿಂದ ಸುಮಾರು 600 ವಿದ್ಯಾರ್ಥಿಗಳು ಹಾಗೂ ಆಧ್ಯಾಪಕರು ಭಾಗವಹಿಸಲಿದ್ದಾರೆ. ಈ ಸಮ್ಮೇಳನವು 2025ನೇ ಡಿ.17 ರ ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ಹಾಗೂ ಪ್ರದರ್ಶಿನಿ ಉದ್ಘಾಟನೆಯ ಮೂಲಕ ಅಧಿಕೃತ ಚಾಲನೆ ನೀಡಲಾಗುವುದು.
ಈ ಸಮ್ಮೇಳನದ ಜನರಲ್ ತಿಮ್ಮಯ್ಯ ಪ್ರದರ್ಶನಿ ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ. 45ನೇ ಪ್ರಾಂತ ಸಮ್ಮೇಳನದ ಉದ್ಘಾಟನಾ ಸಮಾರಂಭ 2025ನೇ ಡಿ.17ರ ಮಧ್ಯಾಹ್ನ 12 ಗಂಟೆಗೆ ಜರುಗಲಿದೆ. ಈ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಜೀ, ಅರ್ಜುನ್ ದೇವಯ್ಯ ಭಾಗವಹಿಸಲಿದ್ದಾರೆ.
ಡಿ.19ರ ಶುಕ್ರವಾರದಂದು ನಡೆಯುವ ಯುವ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೀಡಿಯಾ ಮಾಸ್ಟರ್ಸ್ ಯುಟ್ಯೂಬ್ ಚಾನೆಲ್ ಸಂಸ್ಥಾಪಕರು ರಾಘವೇಂದ್ರ ಜೋಶಿ ಭಾಗವಹಿಸಲಿದ್ದಾರೆ. ಈ ಸಾಲಿನ ಯುವ ಪುರಸ್ಕಾರ ಪ್ರಶಸ್ತಿಯನ್ನು ಶ್ರೀ ಮನೋಜ್ ನಂದೀಶಪ್ಪ, ಸಾಮಾಜಿಕ ಸೇವಾ ಕ್ಷೇತ್ರ ಬೆಂಗಳೂರು ಇವರಿಗೆ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ 45ನೇ ಪ್ರಾಂತ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮತ್ತು ಖ್ಯಾತ ಲೆಕ್ಕಪರಿಶೋಧಕರಾದ ಈಶ್ವರ್ ಭಟ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕೌಶಲ್ಯ, ಟಿ.ಡಿ.ಗಂಧರ್ವ ಪಾಲ್ಗೊಂಡಿದ್ದರು.
