ಮಹಾರಾಷ್ಟ್ರ | ವರದಕ್ಷಿಣೆ ಕಿರುಕುಳ: ಮದುವೆಯಾದ ನಾಲ್ಕು ತಿಂಗಳಲ್ಲೇ ಯುವತಿ ಆತ್ಮಹತ್ಯೆ

ಜಲಗಾಂವ್ (ಮಹಾರಾಷ್ಟ್ರ): ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲೇ ವರದಕ್ಷಿಣೆ ಕಿರುಕುಳವನ್ನು ಸಹಿಸಲಾಗದೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಲಗಾಂವ್‌ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮಯೂರಿ ಗೌರವ್ ತೋಸರ್ (23) ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮಯೂರಿ ತಮ್ಮ ಹುಟ್ಟುಹಬ್ಬದ ಒಂದೇ ದಿನದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ತೆ-ಮಾವಂದಿರ ನಿರಂತರ ಕಿರುಕುಳ ಹಾಗೂ ಹಣಕ್ಕಾಗಿ ಒತ್ತಡವೇ ಇದಕ್ಕೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮದುವೆಯ ಬಳಿಕ ನಾಲ್ಕು ತಿಂಗಳ ಅವಧಿಯಲ್ಲಿ ಹಲವಾರು ಬಾರಿ ಸಂಧಾನ ಪ್ರಯತ್ನ ನಡೆದರೂ, ಕಿರುಕುಳ ಮುಂದುವರಿದಿತ್ತೆಂದು ಪೋಷಕರು ತಿಳಿಸಿದ್ದಾರೆ. ಸಂತ್ರಸ್ತೆಯ ಕುಟುಂಬವು ಆರೋಪಿಗಳನ್ನು ತಕ್ಷಣದ ಬಂಧಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ. ಆರೋಪಿಗಳನ್ನು ವಶಕ್ಕೆ ಪಡೆಯುವ ವರೆಗೆ ಮರಣೋತ್ತರ ಪರೀಕ್ಷೆ ನೆಡಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದೆ. ಘಟನೆಯ ಸಂಬಂಧ ಯಾವುದೇ ಎಫ್‌ಐಆರ್ ಇನ್ನೂ ದಾಖಲಾಗಿಲ್ಲ. ಪ್ರಕರಣವನ್ನು ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.