ನ.29ರಂದು ಮಾಧ್ಯಮ ಸ್ಪಂದನದಿಂದ ಬೃಹತ್ ರಕ್ತದಾನ ಶಿಬಿರ

ನ.29ರಂದು ಮಾಧ್ಯಮ ಸ್ಪಂದನದಿಂದ ಬೃಹತ್ ರಕ್ತದಾನ ಶಿಬಿರ

ಗೋಣಿಕೊಪ್ಪ:ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ನವೆಂಬರ್ 29 ರಂದು ಗೋಣಿಕೊಪ್ಪದಲ್ಲಿರುವ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಮಾಧ್ಯಮ ಸ್ಪಂದನ* ದಿಂದ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಮಾಧ್ಯಮ ‌ಸ್ಪಂದನ ಸ್ಥಾಪಕ ಅಜ್ಜಮಾಡ ರಮೇಶ್ ‌ಕುಟ್ಟಪ್ಪ ತಿಳಿಸಿದ್ದಾರೆ.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ಕೇಂದ್ರದವರು ರಕ್ತ ಸಂಗ್ರಹಿಸಲಿದ್ದು, ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರು ರಕ್ತದಾನ ಮಾಡಬಹುದಾಗಿದೆ. ರಕ್ತದಾನಿಗಳು ಮಾಧ್ಯಮ ಸ್ಪಂದನ ರಕ್ತದಾನದ ಸಂಚಾಲಕರಾದ ವಿ.ವಿ. ಅರುಣ್ ಕುಮಾರ್ (9448331339) ಅವರಲ್ಲಿ ನವೆಂಬರ್ 25 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದೆಂದುಬ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.