ಮಾಯಮುಡಿ:ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಪೊನ್ನಂಪೇಟೆ :ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿಯ ಪೊನ್ನಪ್ಪಸಂತೆಯಲ್ಲಿ ಸೈಕಲ್ ಸವಾರನ ಮೇಲೆ ಕಾಡಾನೆಯು ಬೆಳಗ್ಗೆ 7 ಗಂಟೆಗೆ ಬಾಳೆಲೆ ಮುಖ್ಯ ರಸ್ತೆಯಲ್ಲಿ ದಾಳಿ ನಡೆಸಿದ್ದು ಸವಾರ ಅಜಯ್ ಅಪಾಯದಿಂದ ಪಾರಾಗಿದ್ದಾನೆ. ಆದರೆ ಕಾಡಾನೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾನಸಿಕ ಅಸ್ವಸ್ಥನ ಮೇಲೆ ದಾಳಿ ನಡೆಸಿದ್ದು, ಕಾಡಾನೆಯ ತುಳಿತಕ್ಕೆ ವ್ಯಕ್ತಿ ಬಲಿಯಾಗಿದ್ದಾನೆ.
What's Your Reaction?






