ಮಡಿಕೇರಿ ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆಗೆ ಕಡಿವಾಣ ಹಾಕಿದ ನಗರಸಭೆ
ಮಡಿಕೇರಿ :ಗಾಂಧಿ ಮೈದಾನದ ಒಳಗೆ ಬಾರಿ ವಾಹನಗಳನ್ನು ನಿಲ್ಲಿಸಿ ಅದೇ ಸ್ಥಳ ದಲ್ಲಿ ಅಡುಗೆ ಮಾಡಿ ಪರಿಸರವನ್ನು ಕಸದ ಕೊಂಪೆ ಯಾಗಿ ಮಾಡುತಿದ್ದ ವಾಹನ ಗಳ ನಿಲುಗಡೆಗೆ ಕಡಿವಾಣ ಹಾಕಲು ಕಬ್ಬಿಣ ದ ಬೇಲಿ ಹಾಕಿ ವಾಹನ ನಿಲುಗಡೆಗೆ ಕಡಿವಾಣ ಹಾಕಿ ದಿಟ್ಟ ನಿರ್ಧಾರವನ್ನು ನಗರಸಭೆ ಅಧ್ಯಕ್ಷೆ ಕಲಾವತಿ ಮತ್ತು ಉಪಾಧ್ಯಕ್ಷ ಮಹೇಶ್ ಜೈನಿ ಕೈಗೊಂಡಿದ್ದಾರೆ.
ದಸರಾ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಈ ಕಬ್ಬಿಣ ದ ಬೇಲಿ ಯನ್ನು ತೇರವು ಗೊಳಿಸಿ ನಂತರ ಮತ್ತೆ ಪುನಃ ಅಳವಡಿಸುವ ರೀತಿ ನೆಟ್ ಬೋಲ್ಟ್ ಸಿಸ್ಟಮ್ ನಲ್ಲಿ ವ್ಯವಸ್ಥೆ ಕೂಡ ಇದ್ದು ಶಾಲಾ ಮಕ್ಕಳಿಗೂ ಇದರಿಂದ ಪ್ರಯೋಜನ ವಾಗಲಿದೆ.
