ನಾಪೋಕ್ಲು:ಗುಂಡಿಬಿದ್ದ ರಸ್ತೆಗೆ ತಾತ್ಕಾಲಿಕ ಮುಕ್ತಿ ಕೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಸಾಬ ತಿಮ್ಮಯ್ಯ

Jul 8, 2025 - 23:38
 0  2
ನಾಪೋಕ್ಲು:ಗುಂಡಿಬಿದ್ದ ರಸ್ತೆಗೆ ತಾತ್ಕಾಲಿಕ ಮುಕ್ತಿ ಕೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಸಾಬ ತಿಮ್ಮಯ್ಯ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ಪಟ್ಟಣದಿಂದ ಕೈಕಾಡು-ಪಾರಾಣೆ ಮಾರ್ಗವಾಗಿ ವಿರಾಜಪೇಟೆ ತೆರಳುವ ಮುಖ್ಯರಸ್ತೆಯ ಬೇತು ಗ್ರಾಮದ ಬಳಿಯ ರಸ್ತೆಯಲ್ಲಿ ಅಪಾಯದ ಗುಂಡಿಗಳಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

 ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಈ ರಸ್ತೆಯ ಅವ್ಯವಸ್ಥೆಯಿಂದ ಮಂಗಳವಾರ ಬೈಕ್ ಸವಾರನೊಬ್ಬ ರಸ್ತೆ ಮಧ್ಯದಲ್ಲಿದ್ದ ಅಪಾಯದ ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ. ರಸ್ತೆಯಲ್ಲಿರುವ ಅಪಾಯದ ಗುಂಡಿ ಮುಚ್ಚದೆ ಲೋಕೋಪಯೋಗಿ ಇಲಾಖೆಯವರು ನಿರ್ಲಕ್ಷ್ಯ ವಹಿಸಿದ್ದು ಇದರಿಂದ ಅವಘಡಗಳು ಸಂಭವಿಸುವಂತ್ತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದನ್ನು ಗಮನಿಸಿದ ನಾಪೋಕ್ಲು ಗ್ರಾಮ ಪಂಚಾಯಿತಿಯ ಬೇತು ಗ್ರಾಮದ ಸದಸ್ಯ ಕಾಳೆಯಂಡ ಸಾಬ ತಿಮ್ಮಯ್ಯ ನವರು ಕೂಡಲೇ ಕಾರ್ಮಿಕರನ್ನು ಕರೆತಂದು ಅಪಾಯದ ಗುಂಡಿಯನ್ನು ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ. ಸಾಬ ತಿಮ್ಮಯ್ಯನವರ ಉತ್ತಮ ಸ್ಪಂದನಾ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0