ನಾಪೋಕ್ಲು: ಹಳೇ ತಾಲೂಕಿನಲ್ಲಿ ಸೌಹಾರ್ದತೆಯಿಂದ ಪುತ್ತರಿ ಆಚರಣೆ

ನಾಪೋಕ್ಲು ಸಮೀಪದ ಹಳೇ ತಾಲೂಕಿನಲ್ಲಿ ಸೌಹಾರ್ದತೆಯಿಂದ ಪುತ್ತರಿ ಹಬ್ಬವನ್ನು ಆಚರಿಸಲಾಯಿತು.ಹಳೇ ತಾಲೂಕು ನಿವಾಸಿ ಬೊಪ್ಪೇರ ಸಿ.ಕಾವೇರಪ್ಪ ಹಾಗೂ ಅವರ ಮಗ ಜಯ ಉತ್ತಪ್ಪ ಅವರು ತಮ್ಮ ನಿವಾಸದಲ್ಲಿ ಹಲವು ವರ್ಷಗಳಿಂದಲೂ ಸೌಹಾರ್ದತೆಯಾಗಿ ಪುತ್ತರಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇವರ ನಿವಾಸದಲ್ಲಿ ಸ್ಥಳೀಯ 50ಕ್ಕೂ ಅಧಿಕ ಮುಸ್ಲಿಂ ಬಾಂಧವರು ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದಲ್ಲಿ ಪಾಲ್ಗೊಂಡು ಕದಿರು ತೆಗೆದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಹಬ್ಬದ ಸಂಪ್ರದಾಯ ಮುಗಿದೊಡನೆ ಆಗಮಿಸಿದ ಎಲ್ಲರಿಗೂ ಸೌಹಾರ್ದತೆಯಿಂದ ಯಾವುದೇ ಭೇದಭಾವವಿಲ್ಲದೆ ಊಟೋಪಚಾರದ ಸಮಾರಾಧನೆ ನಡೆಯಿತು.ಎಲ್ಲರೂ ಇದನ್ನು ಪ್ರಸಾದಂತೆ ಸ್ವೀಕರಿಸಿ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.