ನರಿಯಂಡದ: ಪತ್ತೇಟಿ-ತಟ್ಟಮಕ್ಕಿ ಕಾಲೋನಿ ರಸ್ತೆ ಲೋಕಾರ್ಪಣೆ ಮಾಡಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ:ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿದ ಪತ್ತೇಟಿ-ತಟ್ಟಮಕ್ಕಿ ಕಾಲೋನಿ ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಭಾಗವಹಿಸಿದರು. ಈ ಕಾಲೋನಿಯ ನಿವಾಸಿಗಳ ಸುಸಜ್ಜಿತ ರಸ್ತೆಯ ಬೇಡಿಕೆಗೆ ಸ್ಪಂದಿಸಿದ ಮಾನ್ಯ ಶಾಸಕರು, ನೂತನ ಕಾಂಕ್ರೀಟ್ ರಸ್ತೆ ನಿರ್ಮಿಸಲು 40ಲಕ್ಷ ರೂಪಾಯಿ ಈ ಹಿಂದೆ ಅನುದಾನ ಒದಗಿಸಿದ್ದರು.
ಇದೀಗ ಈ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣವಾಗಿ ಸಿದ್ಧಗೊಂಡಿದ್ದು ಇಂದು ಲೋಕಾರ್ಪಣೆ ಬಳಿಕ ಶುಭ ಕೋರಿದ ಶಾಸಕರು, ಕಾಲೋನಿಯ ನಿವಾಸಿಗಳಿಗೆ ಈ ರಸ್ತೆಯು ಅನುಕೂಲ ಆಗುವುದರೊಂದಿಗೆ ಅವರ ಜೀವನದಲ್ಲಿ ಮುಂದೆ ಬರಲು ತನ್ನಿಂದಾಗುವ ಎಲ್ಲಾ ಸಹಾಯ ಮಾಡಲು ಸಿದ್ದರಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ನರಿಯಂದಡ ಗ್ರಾಮ ಅಧ್ಯಕ್ಷರು ಕೌಶಿಕ್ ಕಾವೇರಮ್ಮ, ಉಪಾಧ್ಯಕ್ಷರು ಹಾಗೂ ವಲಯ ಅಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ, ಶೈಲಾ ಕುಟ್ಟಪ್ಪ, ವಾಣಿ, ಪ್ರಕಾಶ್, ಸುಬೀರ್, ಮಮ್ಮಾದ್, ಹಾಗೂ ಪಕ್ಷದ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.
