ನಮ್ಮ ಪೂರ್ವಜರು ಆಹಾರ ಪದ್ದತಿ ಯಲ್ಲಿ ಕೂಡ ನಮಗೆ ಶಿಸ್ತನ್ನು ಬಳವಳಿಯಾಗಿ ನೀಡಿದ್ದಾರೆ: ಕಾಂಚನ್ ಪೊನ್ನಣ್ಣ ಅಭಿಮತ

ಮಡಿಕೇರಿ:ನಮ್ಮ ಪೂರ್ವಜರು ನಮಗೆ ಬದುಕಿನ ಶಿಸ್ತಿನ ಜೊತೆಗೆ ಆಹಾರ ಪದ್ದತಿಯಲ್ಲಿಯೂ ಕೂಡ ಶಿಸ್ತನ್ನು ಬಳವಳಿಯಾಗಿ ನೀಡಿದ್ದಾರೆ ಎಂದು ಸಮಾಜ ಸೇವಕಿ, ಎ.ಎಸ್.ಪೊನ್ನಣ್ಣ ರವರ ಧರ್ಮ ಪತ್ನಿ ಕಾಂಚನ್ ಪೊನ್ನಣ್ಣ ನವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಕಕ್ಕಡ ನಮ್ಮೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕೊಡಗಿನ ಪರಿಸರ ,ವಾತಾವರಣವನ್ನು ಪರಿಗಣಿಸಿ ಆಯಾ ಕಾಲಕ್ಕೆ ಯಾವ ರೀತಿಯ ಆಹಾರ ಬಳಕೆ ಮಾಡಬೇಕು ಎಂದು ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ನಿರ್ಧರಿಸಿದ್ದರು ಎಂದರೆ ಅವರ ಜಾಣ್ಮೆಯನ್ನು ನಾವು ಮೆಚ್ಚಲೇ ಬೇಕು.ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ವೈವಿಧ್ಯಮಯ ಆಹಾರ ಬಳಕೆ ಮಾಡುತ್ತಿದ್ದು ಇವುಗಳನ್ನು ಕಕ್ಕಡ ನಮ್ಮೆಯಲ್ಲಿ ಪ್ರದರ್ಶನಮಾಡಿ ನಮ್ಮ ಪರಂಪರೆಯನ್ನು ಮುಂದಿನ ಪೀಳಗೆಗೆ ಶಾಶ್ವತವಾಗಿ ಉಳಿಸಲು ಪೊಮ್ಮಕ್ಕಡ ಕೂಟದ ಪ್ರಯತ್ನ ಸ್ವಾಗತಾರ್ಹ ಎಂದು ಕಾಂಚನ್ ಪೊನ್ನಣ್ಣ ಶ್ಲಾಘಿಸಿದರು.