ಅನುಮತಿ ಪಡೆಯದೆ, ರಸ್ತೆ ಬದಿಯಲ್ಲಿ ಏಡಿಗಳ ಮಾರಾಟ ಮಾಡುತ್ತಿದ್ದವರಿಗೆ ಪೊನ್ನಂಪೇಟೆ ಪ.ಪಂ.ನಿಂದ ದಂಡ!

ಅನುಮತಿ ಪಡೆಯದೆ, ರಸ್ತೆ ಬದಿಯಲ್ಲಿ ಏಡಿಗಳ ಮಾರಾಟ ಮಾಡುತ್ತಿದ್ದವರಿಗೆ ಪೊನ್ನಂಪೇಟೆ ಪ.ಪಂ.ನಿಂದ ದಂಡ!

ಪೊನ್ನಂಪೇಟೆ :-ಪೊನ್ನಂಪೇಟೆ ತಾಲೂಕು ಕಚೇರಿಯ ಎದುರು ರಸ್ತೆಬದಿಯಲ್ಲಿ ಪಟ್ಟಣ ಪಂಚಾತಿಯಿಂದ ಯಾವುದೇ ಅನುಮತಿ ಪಡೆಯದೇ ಮತ್ತು ಸುಂಕ ಪಾವತಿಸದೆ ಏಡಿಗಳನ್ನು ಮಾರಾಟ ಮಾಡುತ್ತಿದ್ದವರಿಗೆ ಪಟ್ಟಣ ಪಂಚಾಯತಿ ವತಿಯಿಂದ ದಂಡ ವಿಧಿಸಿ, ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

 ಪಟ್ಟಣದ ತಾಲೂಕು ಕಚೇರಿಯ ಎದುರು ರಸ್ತೆ ಬದಿಯಲ್ಲಿ ಏಡಿಗಳನ್ನು ಮಾರಾಟ ಮಾಡುತ್ತಿದ್ದುದ್ದನ್ನು ಗಮನಿಸಿದ ಸಾರ್ವಜನಿಕರು ಪಟ್ಟಣ ಪಂಚಾಯತಿ ಅಧ್ಯಕ್ಷ ಅಣ್ಣೀರ ಹರೀಶ್ ಅವರ ಗಮನಕ್ಕೆ ತಂದ ಮೇರೆಗೆ, ಪಟ್ಟಣ ಪಂಚಾಯತಿ ಸಿಬ್ಬಂದಿ ಯೋಗೇಶ್ ಕುಮಾರ್, ಪೌರ ಕಾರ್ಮಿಕರಾದ ರವಿ, ಮಾದೇವ ಹಾಗೂ ಶಂಕರ್ ಅವರನ್ನು ವ್ಯಾಪಾರ ಮಾಡುತ್ತಿದ್ದ ಸ್ಥಳಕ್ಕೆ ಕಳುಹಿಸಿ, ಏಡಿಗಳ ಸಹಿತ, ಮಾರಾಟ ಮಾಡುತ್ತಿದವರನ್ನು ಪಟ್ಟಣ ಪಂಚಾಯತಿ ಕಚೇರಿ ಕರೆಸಿ, ಅನುಮತಿ ಪಡೆಯದೇ ಹಾಗೂ ಸುಂಕ ಪಾವತಿಸದೇ ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಐನೂರು ರೂಪಾಯಿಗಳ ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಲಾಯಿತೆಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್. ಗೋಪಿ ಅವರು ಮಾಹಿತಿ ನೀಡಿದರು.

ವರದಿ:ಚೆಪ್ಪುಡಿರ ರೋಷನ್, ಪೊನ್ನಂಪೇಟೆ