ಪೊನ್ನಂಪೇಟೆ: ವಾಹನ ಅಪಘಾತ, ಪಾದಚಾರಿಗೆ ಡಿಕ್ಕಿ,‌ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕ

ಪೊನ್ನಂಪೇಟೆ: ವಾಹನ ಅಪಘಾತ, ಪಾದಚಾರಿಗೆ ಡಿಕ್ಕಿ,‌ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕ

ಪೊನ್ನಂಪೇಟೆ:ಟಿ. ಶೆಟ್ಟಿಗೇರಿ, ಬಿರುನಾಣಿ ಮುಖ್ಯ ರಸ್ತೆಯ ನೆಮ್ಮಲೆ ಬಳಿ ವಾಹನ ಅಪಘಾತದಿಂಗಾಗಿ ಓರ್ವ ವ್ಯಕ್ತಿ ಸಾವಿಗೀಡಾದ ಘಟನೆ ನಡೆದಿದೆ. ದಾರಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಮಾರುತಿ ಬ್ರಿಜಾ ವಾಹನ ಡಿಕ್ಕಿಪಡಿಸಿ ಟ್ರಾನ್ಸ್ ಫಾರ್ಮ್ ಗೆ ಗುದ್ದಿದೆ. ವೆಸ್ಟ್ ನೆಮ್ಮಲೆ ನಿವಾಸಿ ಕಾರ್ಮಿಕ ಗಪ್ಪು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ವಾಹನ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.