ಡಿ.15ರಂದು ನಾಪೋಕ್ಲುವಿನ ಇತಿಹಾಸ ಪ್ರಸಿದ್ಧ ಶ್ರೀ ಪೊನ್ನುಮುತ್ತಪ್ಪ ದೇವಾಲಯದಲ್ಲಿ ಪುತ್ತರಿವೆಳ್ಳಾಟಂ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಇತಿಹಾಸ ಪ್ರಸಿದ್ಧ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ಡಿ. 15ರಂದು ವಿವಿಧ ದೈವ ಕೋಲ ಗಳೊಂದಿಗೆ ಆಚರಿಸಲ್ಪಡುವ ಪುತ್ತರಿವೆಳ್ಳಾಟಂ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಪೊನ್ನು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಎ.ಕೆ.ಚಂದ್ರನ್ ಅವರು ತಿಳಿಸಿದ್ದಾರೆ.
ದೇವಾಲಯದ ಆವರಣದಲ್ಲಿ ಗುರುವಾರ ಆಯೋಜಿಸಲಾದ ಪುತ್ತರಿ ಹಬ್ಬಾಚಣೆ ಕಾರ್ಯಕ್ರಮದ ಸಂದರ್ಭ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಹಲವಾರು ವರ್ಷಗಳಿಂದ ನಮ್ಮ ದೇವಾಲಯದಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಪುತ್ತರಿವೆಳ್ಳಾಟಂ ನಡೆಸಿಕೊಂಡು ಬರುತ್ತಿದ್ದೇವೆ.ಅದರಂತೆ ಡಿ.15ರ ಸೋಮವಾರ ಮದ್ಯಾಹ್ನ 3ಗಂಟೆಗೆ ದೇವಾಲಯದಲ್ಲಿ ಕೇರಳದ ಪ್ರಖ್ಯಾತ ಪರಶಿನಿಕಡವು ಮಡೆಯನ್ ಅವರ ನೃತ್ಯದೊಂದಿಗೆ ದೇವರನ್ನು ಮಲೆ ಇಳಿಸುವ ಮೂಲಕ ಪುತ್ತರಿವೆಳ್ಳಾಟಂಗೆ ಚಾಲನೆ ನೀಡಲಿದೆ.ಸಂಜೆ 6ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಲಿದೆ.
ರಾತ್ರಿ 7.30ಗಂಟೆಗೆ ಗುಳಿಗ ದೇವರ ವೆಳ್ಳಾಟಂ,8ಗಂಟೆಗೆ ಕುಟ್ಟಿಚಾತ ದೇವರ ವೆಳ್ಳಾಟಂ ನಡೆದ ಬಳಿಕ 9.30ಗಂಟೆಗೆ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಲಿದ್ದು ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಚಂದ್ರನ್ ಅವರು ತಿಳಿಸಿದ್ದಾರೆ.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ. ಸಿ. ರಾಜೀವನ್, ಉಪಾಧ್ಯಕ್ಷ ರಿತೇಶ್ ಚಿನ್ನ, ಖಜಾಂಚಿ ಪಿ.ಸಿ. ಕಿಶೋರ್,ಸಹಕಾರ್ಯದರ್ಶಿ ಮನೋಹರ್, ಬಿ.ಬಿ.ಹರೀಶ್, ಟಿ.ಸಿ.ಮಣಿ, ಅಜಿತ್,ಟಿ.ಸಿ.ಹರೀಶ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
