ಮಡಿಕೇರಿ ವ್ಯಾಪ್ತಿಯಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ಪ್ರಾರಂಭಿಸಲು ಬಾಡಿಗೆ ಕಟ್ಟಡ ಒದಗಿಸಲು ಮನವಿ

ಮಡಿಕೇರಿ:-ಮಡಿಕೇರಿ ವ್ಯಾಪ್ತಿಯಲ್ಲಿ 01 ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ಪ್ರಾರಂಭಿಸಲು ಪ್ರತಿ ಕೊಠಡಿಗೆ 60 ಸಂಖ್ಯಾಬಲಕ್ಕೆ ಅನುಗುಣವಾಗಿ ಸುಮಾರು 7 ರಿಂದ 8 ಕೊಠಡಿಗಳನ್ನೊಳಗೊಂಡ ಸುಸಜ್ಜಿತವಾದ ಬಾಡಿಗೆ ಕಟ್ಟಡವು ಬೇಕಾಗಿರುತ್ತದೆ. ಈ ಕಟ್ಟಡವು ಮೂಲಭೂತ ಸೌಕರ್ಯಗಳಾದ 24*7 ನೀರಿನ ವ್ಯವಸ್ಥೆ, 24*7 ವಿದ್ಯುತ್ ಸರಬರಾಜು, ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ, ಲ್ಯಾಬ್, ಗ್ರಂಥಾಲಯ, ಕಂಪ್ಯೂಟರ್ ಸೌಲಭ್ಯ ಹಾಗೂ ಇತರೆ ಸಂಗ್ರಹಕ್ಕೆ ಪ್ರತ್ಯೇಕವಾದ ಸ್ಥಳಾವಕಾಶ, ಸೂಕ್ತವಾದ ಗಾಳಿ, ಬೆಳಕು ಹೊಂದಿರಬೇಕು. ಕಟ್ಟಡಕ್ಕೆ ಸೇಪ್ಟಿ ಆರ್ಥಿಂಗ್ ಇರಬೇಕು. ಕಟ್ಟಡವು ವಿದ್ಯುತ್ ಕಂಬಗಳಿಂದ ಸೂಕ್ತವಾದ ಅಂತರದಲ್ಲಿರಬೇಕು ಹಾಗೂ ಕಟ್ಟಡವು ವಿದ್ಯುತ್ ತಂತಿಗಳಿಂದ ಸುರಕ್ಷತೆಯನ್ನು ಕಾಯ್ದುಕೊಂಡಿರಬೇಕು. ಕಟ್ಟಡವು ನಿಷೇದಿತ ಹಾಗೂ ವ್ಯಸನ ಪದಾರ್ಥಗಳಿಂದ ಮುಕ್ತವಾದ ಸ್ಥಳದಲ್ಲಿರಬೇಕು. ಕಟ್ಟಡವು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿರಬೇಕು. ಕಟ್ಟಡದ ಮಾಲೀಕರು ಟೈಟಲ್ ಡೀಡ್ ಹೊಂದಿರಬೇಕು. ಆಸಕ್ತಿಯುಳ್ಳ ಕಟ್ಟಡ ಮಾಲೀಕರು 08272-225528, ಮೊ.ಸಂ.9686138688, 9972799091 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ.