ರಸ್ತೆ ಅಪಘಾತ: ಪ್ರಯಾಣಿಕರ ಆರೋಗ್ಯ ವಿಚಾರಿಸಿದ ಎ.ಎಸ್ ಪೊನ್ನಣ್ಣ

ವಿರಾಜಪೇಟೆ:ಇಂದು ಬೆಂಗಳೂರಿನಿಂದ ತನ್ನ ಕ್ಷೇತ್ರ ದತ್ತ ಆಗಮಿಸುತ್ತಿದ್ದ ಸಂದರ್ಭದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜು ಬಳಿ ಸರ್ಕಾರಿ ಬಸ್ ಅಪಘಾತ ಕೀಡಾಗಿರುವುದನ್ನು ಗಮನಿಸಿದ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಕೂಡಲೇ ತನ್ನ ವಾಹನವನ್ನು ನಿಲ್ಲಿಸಿ ಅಪಘಾತ ಸ್ಥಳಕ್ಕೆ ತೆರಳಿ ವಿಚಾರಿಸಿದರು. ತಾಂತ್ರಿಕ ದೋಷದಿಂದ ಬಸ್ ಅಪಘಾತ ಕೀಡಾಗಿರುವುದನ್ನು ಅರಿತ ಶಾಸಕರು ಬಳಿಕ ಪ್ರಯಾಣಿಕರ ಆರೋಗ್ಯ ಬಗ್ಗೆ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡಲು ತಿಳಿಸಿದರು.
What's Your Reaction?






