ರಸ್ತೆ ಅಪಘಾತ:ಗುತ್ತಿಗೆದಾರ ದುರ್ಮರಣ

ರಸ್ತೆ ಅಪಘಾತ:ಗುತ್ತಿಗೆದಾರ ದುರ್ಮರಣ

ಕುಶಾಲನಗರ: ಪಿರಿಯಾಪಟ್ಟಣ ತಾಲೂಕಿನ ಮಂತನಹಳ್ಳಿ ಬಳಿ ನಡೆದ ವಾಹನ ಅಪಘಾತದಲ್ಲಿ ಗುತ್ತಿಗೆದಾರ ಬೈಲುಕೊಪ್ಪದ ಅರುಣ (45) ಮೃತಪಟ್ಟಿದ್ದಾರೆ. ರಾತ್ರಿ ಸ್ನೇಹಿತರೊಂದಿಗೆ ಬೈಲುಕೊಪ್ಪದತ್ತ ತಮ್ಮ ಕಾರಿನಲ್ಲಿ ಆಗಮಿಸುತ್ತಿದ್ದ ಸಂದರ್ಭ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಅರುಣ ಸ್ಥಳದಲ್ಲಿ ಮೃತರಾದರು. ಕಾರಿನಲ್ಲಿದ್ದ ಮತ್ತೋರ್ವ ಅರುಣ ಹಾಗೂ ರವಿ ಎಂಬವರಿಗೆ ಗಾಯಗಳಾಗಿದೆ.