ಎಸ್. ಎನ್. ಡಿ. ಪಿ ಕೊಡಗು ಯೂನಿಯನ್ ವತಿಯಿಂದ ಸೆಪ್ಟೆಂಬರ್ 7ಕ್ಕೆ ಶ್ರೀ ನಾರಾಯಣ ಗುರು ಜಯಂತಿ

ಎಸ್. ಎನ್. ಡಿ. ಪಿ ಕೊಡಗು ಯೂನಿಯನ್ ವತಿಯಿಂದ ಸೆಪ್ಟೆಂಬರ್ 7ಕ್ಕೆ ಶ್ರೀ ನಾರಾಯಣ ಗುರು ಜಯಂತಿ

ಸಿದ್ದಾಪುರ: ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ ವತಿಯಿಂದ ಸೆಪ್ಟೆಂಬರ್ 7ರಂದು ಸಿದ್ದಾಪುರದಲ್ಲಿ ಶ್ರೀ ನಾರಾಯಣ ಗುರುವಿನ 171ನೇ ಜಯಂತಿ ಆಚರಣೆ ನಡೆಯಲಿದೆ ಎಂದು ಯೂನಿಯನ್ ಜಿಲ್ಲಾಧ್ಯಕ್ಷರಾದ ವಿ.ಕೆ ಲೋಕೇಶ್ ತಿಳಿಸಿದ್ದಾರೆ.

ಸಿದ್ದಾಪುರದ ಎಸ್.ಎನ್.ಡಿ.ಪಿ‌ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್. ಎನ್. ಡಿ. ಪಿ ಕೊಡಗು ಯೂನಿಯನ್, ಗುರು ಜಯಂತಿ ಆಚರಣಾ ಸಮಿತಿ ಹಾಗೂ ಜಿಲ್ಲೆಯ ಎಸ್.ಎನ್. ಡಿ.ಪಿ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ಸೆ.7 ರಂದು ವಿಜ್ರಂಭಣೆಯಿಂದ ನಾರಾಯಣ ಗುರು ಜಯಂತಿ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಯೂನಿಯನ್ ಮಾಜಿ‌ ಕಾರ್ಯದರ್ಶಿ ಎಂ.ಪಿ ಶಿವಪ್ರಸಾದ್ ಧ್ವಜಾರೋಹಣ ನೆರವೇರಿಸಲಿದ್ದು, ಬೆಳಗ್ಗೆ 10.30 ಗಂಟೆಗೆ ನಡೆಯುವ ಮೆರವಣಿಗೆಯನ್ನು ಪ್ರಮುಖರಾದ ಎ.ವಿ ಸಜೀವನ್ ಅವರು ಉದ್ಘಾಟಿಸಲಿದ್ದಾರೆ.

 ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ವಾದ್ಯ ಮೇಳಗಳೊಂದಿಗೆ ಶ್ರೀ ಅಯ್ಯಪ್ಪ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಿಸಿ ಸಿದ್ದಾಪುರ ಸ್ವರ್ಣಮಾಲ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಬಳಿಕ ವಿ.ಕೆ ಲೋಕೇಶ್ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯಧುವೀರ್ ಒಡೆಯರ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕರಾದ ಎ.ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ವಿಧಾನಸಭಾ ಮಾಜಿ ಅಧ್ಯಕ್ಷರಾದ ಕೆ.ಜಿ ಬೋಪಯ್ಯ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದರು.

 ಕಾರ್ಯಮದಲ್ಲಿ ಎಸ್.ಎಸ್ ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಯೂನಿಯನ್ ಸದಸ್ಯರ ಮಕ್ಕಳಿಗೆ ಸನ್ಮಾನ, ಸಾಧಕರಿಗೆ ಸನ್ಮಾನ‌ನಡೆಯಲಿದೆ. ಕೇರಳದ ಪ್ರಸಿದ್ಧ ಕಲಾವಿದ ರಂಜು ಚಾಲಕ್ಕುಡಿ ಅವರನ್ನೊಳಗೊಂಡ ತಂಡದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಎಸ್.ಎನ್.ಡಿ.ಪಿ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಕೆ. ವಿ ಪ್ರೇಮಾನಂದ, ಆಚರಣಾ ಸಮಿತಿ ಅಧ್ಯಕ್ಷ ಎಂ ಜಿ ರಾಜು, ಕಾರ್ಯದರ್ಶಿ ರೆಜಿತ್ ಕುಮಾರ್ ಕೆ ಕೆ, ಯೂನಿಯನ್ ಪ್ರಮುಖರಾದ ಆರ್.ಗಿರೀಶ್, ಪಾಪಯ್ಯ, ಎಂ.ಎ ಆನಂದ, ಯೂನಿಯನ್ ಮಹಿಳಾ ಅಧ್ಯಕ್ಷರಾದ ರೀಶ ಸುರೇಂದ್ರ ಇದ್ದರು.