ಶಾಸಕರ ಅನುದಾನಲ್ಲಿ ನಿಮಾರ್ಣವಾಗುತ್ತಿರುವ 15 ಲಕ್ಷ ವೆಚ್ಚದ ಕೊಯನಾಡು-ಕಲ್ಲಾಳ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ

ಸಂಪಾಜೆ:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರ ಅನುದಾನದಲ್ಲಿ, ಕೊಯನಾಡು-ಕಲ್ಲಾಳ ರಸ್ತೆ ಅಭಿವೃದ್ಧಿಗೆ ₹ 15 ಲಕ್ಷಗಳು* ಬಿಡುಗಡೆಯಾಗಿ, ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನು ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯವರು ವೀಕ್ಷಿಸಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ಕುಮಾರ್ ಕನ್ಯಾನ, ಗ್ರಾಮ ಪಂಚಾಯತ್ ಸದಸ್ಯ ಪಿ.ಎಲ್ ಸುರೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್ ಮೊಯಿದಿನ್ ಕುಂಞಿ, ಯುವ ಮುಖಂಡ ಹನೀಫ್ ಎಸ್.ಪಿ, ಗ್ಯಾರಂಟಿ ಸಮಿತಿ ಸದಸ್ಯೆ ರಾಜೇಶ್ವರಿ ಕೆ.ಕೆ, ವಲಯ ಪ್ರಧಾನ ಕಾರ್ಯದರ್ಶಿ ರಿತಿನ್ ಡೆಮ್ಮಲೆ, ಹಾಗೂ ಕಲ್ಯಾಳ ಗ್ರಾಮಸ್ಥರು ಹಾಜರಿದ್ದರು.