ಸೊಸೈಟಿ ಅಕ್ಕಿ ಸಂಗ್ರಹ ದಂಧೆ:ಮೂರು ಕ್ವಿಂಟಾಲ್ ಅಕ್ಕಿ ವಶಕ್ಕೆ! ಆಟೋ ಚಾಲಕ ಪರಾರಿ!

ಕುಶಾಲನಗರ:ಕಾಳಸಂತೆಯಲ್ಲಿ ಮಾರಾಟಕ್ಕೆ ಸಂಗ್ರಹಿಸುತ್ತಿದ್ದ ಸೊಸೈಟಿ ಅಕ್ಕಿಯನ್ನು ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ಎಂ.ಎಸ್.ಅವರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು,ಮನೆಮನೆಗಳಿಂದ ಗೂಡ್ಸ್ ಆಟೋ ಮೂಲಕ ಸೊಸೈಟಿ ಅಕ್ಕಿ ಸಂಗ್ರಹ ದಂಧೆ ನಡೆಯುತ್ತಿತ್ತು. ಮನೆಗಳಿಂದ ಸಂಗ್ರಹಿಸಿದ ಅಕ್ಕಿಯನ್ನು ಅಂಗಡಿ, ಮಿಲ್ ಗಳಿಗೆ ಸಾಗಾಟ ಮಾಡುವ ಶಂಕೆ ವ್ಯಕ್ತವಾಗಿದ್ದು, ಸುಂದರ ನಗರ ಮನೆಯೊಂದರ ಬಳಿ ವಾಹನ ವಶಪಡಿಸಿಕೊಂಡಿದ್ದು, ಸುಂಟಿಕೊಪ್ಪದಿಂದ ಗೂಡ್ಸ್ ಆಟೋ ಹಿಂಬಾಲಿಸಿ ಬಂದ ಅಧಿಕಾರಿಯಿಂದ ರೇಡ್ ಮಾಡಲಾಗಿದ್ದು, ದಂಧೆಯ ರೂವಾರಿ ಆಟೋ ಚಾಲಕ ಪರಾರಿಯಾಗಿದ್ದು, ಕಾರ್ಮಿಕನನ್ನು ವಶಕ್ಕೆ ಪಡೆಯಲಾಗಿದೆ. ಆಟೋದಲ್ಲಿದ್ದ ಅಂದಾಜು ಮೂರು ಕ್ವಿಂಟಾಲ್ ಅಕ್ಕಿ, ಸ್ಕೇಲ್ ವಶಕ್ಕೆ ಪಡೆಯಲಾಗಿದೆ.