ಸೋಮವಾರಪೇಟೆ: ವಿದ್ಯುತ್ ಕಂಬ ಅರ್ಧಕ್ಕೆ ತುಂಡಾಗಿ ಬಿದ್ದು,ಇಬ್ಬರು ಲೈನ್ ಮ್ಯಾನ್ ಗಳಿಗೆ ಗಾಯ

ಸೋಮವಾರಪೇಟೆ: ವಿದ್ಯುತ್ ಕಂಬ ಅರ್ಧಕ್ಕೆ ತುಂಡಾಗಿ ಬಿದ್ದು,ಇಬ್ಬರು ಲೈನ್ ಮ್ಯಾನ್ ಗಳಿಗೆ ಗಾಯ

ಸೋಮವಾರಪೇಟೆ:ವಿದ್ಯುತ್ ಕಂಬ ಅರ್ಧಕ್ಕೆ ತುಂಡಾಗಿ ಮುರಿದು ಬಿದ್ದು, ಈರ್ವರು ಲೈನ್ ಮನೆಗಳು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ. ದುದ್ದುಗಲ್ಲು ಬಳಿಯಲ್ಲಿ ವಿದ್ಯುತ್ ಮಾರ್ಗ ದುರಸ್ತಿ ಮಾಡುವ ಸಂದರ್ಭ ನೂತನ ಕಂಬ ತುಂಡಾಗಿದ್ದು ಕೆಲಸದಲ್ಲಿ ನಿರತರಾಗಿದ್ದ ಲೈನ್ ಮ್ಯಾನ್ ಜಾದವ್ ಹಾಗೂ ದಿನೇಶ್ ಅವರುಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತಕ್ಷಣ ಸ್ಥಳೀಯ ರು ಈರ್ವರನ್ನೂ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಈರ್ವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.