ಸೋಮವಾರಪೇಟೆ:ಬಿಸಿಎಂ ವಿದ್ಯಾರ್ಥಿನಿಲಯದ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಜೆಸಿಐ ಸುಂಟಿಕೊಪ್ಪ ವತಿಯಿಂದ ತರಬೇತಿ

Jul 5, 2025 - 22:58
Jul 5, 2025 - 22:59
 0  37
ಸೋಮವಾರಪೇಟೆ:ಬಿಸಿಎಂ ವಿದ್ಯಾರ್ಥಿನಿಲಯದ ಪದವಿ ಪೂರ್ವ ಹಾಗೂ ಪದವಿ  ವಿದ್ಯಾರ್ಥಿಗಳಿಗೆ ಜೆಸಿಐ ಸುಂಟಿಕೊಪ್ಪ ವತಿಯಿಂದ ತರಬೇತಿ

ಸೋಮವಾರಪೇಟೆ (Coorg Daily) : ಸೋಮವಾರಪೇಟೆ ಬಿಸಿಎಂ ವಿದ್ಯಾರ್ಥಿನಿಲಯದ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿನಿಗಳಿಗೆ ಜೆಸಿಐ ಸುಂಟಿಕೊಪ್ಪ ವತಿಯಿಂದ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶನಿವಾರ ಸಂಜೆ 5:00 ಗಂಟೆಗೆ ಗಂಟೆಗೆ ಜೆಸಿ ಮೇನಕಾ ಆನಂದಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಸಂಯೋಜಕರಾದ ಸತೀಶ್ ಕುಮಾರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ JCI ಪೂರ್ವ ಅಧ್ಯಕ್ಷರಾದ ದೇವಿ ಪ್ರಸಾದ್, ಉದ್ಘಾಟಕರಾಗಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀ ಸ್ವಾಮಿ ಭಾಗವಹಿಸಿದ್ದರು. ಬಿಸಿಎಂ ವಿದ್ಯಾರ್ಥಿಗಳ ವಾರ್ಡನ್ ಗಾಯತ್ರಿ ಅವರು ಸ್ವಾಗತ ಕೋರಿದರು.JCI ಸುಂಟಿಕೊಪ್ಪ ಸದಸ್ಯರಾದ JC ಡೆನ್ನಿಸ್ ಡಿಸೋಜ, ಜೆಸಿ ಮಂಜುನಾಥ್, ಜೆಸಿ ನಿಯಾಝ್ ಜೆಸಿ ಪ್ರಣೀತ್ ಡೆಸೋಜ, ಜೆಸಿ ನಿಶಾಂತ್ ಭಾಗವಹಿಸಿದ್ದರು. ತರಬೇತಿಯಲ್ಲಿ BCM ಹಾಸ್ಟೇಲಿನ 35 ವಿದ್ಯಾರ್ಥಿಗಳು ತರಬೇತಿ ಪಡೆದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0