ಮದ್ಯಕ್ಕಾಗಿ ಹಣ ಕೊಡಲಿಲ್ಲವೆಂದು ತಂದೆಯನ್ನೇ ಕೊಂದ ಮಗ! : ಶವಸಂಸ್ಕಾರದ ವೇಳೆ ಆರೋಪಿ ಬಂಧನ

ಮದ್ಯಕ್ಕಾಗಿ ಹಣ ಕೊಡಲಿಲ್ಲವೆಂದು ತಂದೆಯನ್ನೇ ಕೊಂದ ಮಗ! :  ಶವಸಂಸ್ಕಾರದ ವೇಳೆ ಆರೋಪಿ ಬಂಧನ
Photo credit: TV09 (ಫೋಟೋ:ಸಂಜಯ್ ಕುಮಾರ್)

ಗೌರಿಬಿದನೂರು: ಮದ್ಯ ಸೇವಿಸಲು ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡ ಮಗನೊಬ್ಬ ತಂದೆಯನ್ನೇ ಹತ್ಯೆ ಮಾಡಿದ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನೆಹರುನಗರದಲ್ಲಿ ನಡೆದಿದೆ.

ಮೃತರನ್ನು ಗಂಗಣ್ಣ (55) ಎಂದು ಗುರುತಿಸಲಾಗಿದ್ದು, ಆರೋಪಿ ಮಗ ಸಂಜಯ್ ಕುಮಾರ್ (25) ಮದ್ಯಕ್ಕಾಗಿ ಹಣ ಕೇಳಿದಾಗ ತಂದೆ ನಿರಾಕರಿಸಿದ್ದಕ್ಕೆ ಕೋಪಗೊಂಡು ರೀಪಿನ ಪಟ್ಟಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 ಘಟನೆಯ ಬಳಿಕ ತಂದೆಯ ಶವಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಸಂಜಯ್ ಕುಮಾರ್‌ನ್ನು ಗೌರಿಬಿದನೂರು ಟೌನ್ ಠಾಣೆ ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ.

ಈ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ ಎಂದು ತಿಳಿದು ಬಂದಿದೆ.