ಕುಡಿದ ಮತ್ತಿನಲ್ಲಿ ಅಪ್ಪನಿಗೆ ಇರಿದ ಮಗ: ಮಲಗಿದ್ದಲ್ಲೇ ಪ್ರಾಣ ಬಿಟ್ಟ ತಂದೆ

ಕುಡಿದ ಮತ್ತಿನಲ್ಲಿ ಅಪ್ಪನಿಗೆ ಇರಿದ ಮಗ: ಮಲಗಿದ್ದಲ್ಲೇ ಪ್ರಾಣ ಬಿಟ್ಟ ತಂದೆ
ಆರೋಪಿ ರಂಜನ್

ಚಿಕ್ಕಮಗಳೂರು:ಮಗ ಅಂದ್ರೆ ತಂದೆಗೆ ಎಲ್ಲಿಲ್ಲದ ಪ್ರೀತಿ,ಕೂಲಿ ಮಾಡಿದ್ರು ಮಗ ಕೇಳಿದ್ದ ಬೈಕ್ ಕೊಡಿಸಿದ್ರು,ಜೊತೆಗೆ ಕೂತು ಪೆಗ್ ಹಾಕುವಷ್ಟರ ಮಟ್ಟಿಗೆ ತಂದೆ ಮಗನ ನಡುವೆ ದೊಸ್ತಿ ಇತ್ತು, ಆದ್ರೆ ಅದೇ ಪ್ರೀತಿಯ ಕೊನೆಯ ಪೆಗ್ ತಂದೆಯ ಪಾಲಿಗೆ ಮುಳುವಾಗಿದೆ,ಹೆತ್ತು ಹೊತ್ತು ಸಲುಹಿದ ಮಗನೇ ತಂದೆ ಬಾಳಿಗೆ ಯಮನಾಗಿದ್ದಾನೆ. ಕುಡಿದ ಮತ್ತಿನಲ್ಲಿ ಅಪ್ಪನಿಗೆ ಇರಿದ ಮಗ- ಮಲಗಿದ್ದಲ್ಲೆ ತಂದೆ ಪ್ರಾಣಬಿಟ್ಟಿದ್ದಾರೆ. ಅನಾರೋಗ್ಯದಿಂದ ಮೃತಪಟ್ಟರು ಎಂದು ಮಗ ಕಟ್ಟು ಕಥೆ ಕಟ್ಟಿದನ್ನು. ಕುಡಿದ ಮತ್ತಿನಲ್ಲಿ ತಂದೆಗೆ ಮಗ ಇರಿದು ಕೊಂದ ಘಟನೆ ಚಿಕ್ಕಮಗಳೂರಿನ‌ ಆಲ್ದೂರು ಸಮೀಪದ ಗುಪ್ತಾ ಶೇಟ್ಟಿಹಳ್ಳಿಯಲ್ಲಿ ನಡೆದಿದೆ.

(21) ವರ್ಷದ ರಂಜನ್ ಹತ್ಯೆಯ ಆರೋಪಿಯಾದ್ರೆ (51) ವರ್ಷದ ಮಂಜುನಾಥ್ ಮಗನಿಂದ ಹತ್ಯೆಯಾದ ನತದೃಷ್ಟ ತಂದೆ. ಕಳೆದ ಶನಿವಾರ ಎಂದಿನಂತೆ ತಂದೆ ಮಗ ಆಲ್ದೂರಿಗೆ ಹೋಗಿ ಸಂತೆ ಮಾಡ್ಕೊಂಡು ಬ್ಯಾಗ್ ತುಂಬಾ ತರಕಾರಿ ತಗೋಂಡು ಮನೆ ಸೇರಿದ್ರು. ರಾತ್ರಿಯಾಗುತ್ತಿದ್ದಂತೆ ಅಡಿಗೆ ಮಾಡಿ ಲೈಟಾಗಿ ಎಣ್ಣೆ ಹಾಕೊಂಡು ಇದ್ದವರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತು ಬೆಳೆದಿತ್ತು. ಈ ವೇಳೆ ತಂದೆ ಬೆನ್ನ ಹಿಂದೆ ನಿಂತಿದ್ದ ಮಗ ತಂದೆಗೆ ಹರಿತವಾದ ಚಾಕು ಇರಿದ್ದಿದ್ದಾನೆ.ಕೊನೆಗೆ ಜಗಳ ಬಿಡಿಸಿದ್ದ ತಾಯಿ ಚಾಕುವಿನಿಂದ ಆದ ಮಂಜುನಾಥ್ ಗಾಯಕ್ಕೆ ಅರಿಶಿನ ಹುಡಿ ಹಾಕಿ ಪ್ರಥಮ ಚಿಕಿತ್ಸೆ ಮಾಡಿ ಸುಮ್ಮನಾಗಿದ್ದಾರೆ. ಗಾಯ ಆಳವಾಗಿದ್ದರಿಂದ ರಕ್ತಸ್ರಾವದಿಂದ ಮಂಜುನಾಥ್ ಪ್ರಾಣ ಪಕ್ಷಿ ಹಾರಿಹೋಗಿದೆ. ಇದಕ್ಕೆ ಕೊಲೆಗಾರ ಪುತ್ರ ತಂದೆಯ ಸಾವಿಗೆ ಅನಾರೋಗ್ಯದ ಕಥೆ ಕಟ್ಟಿದ್ದ. ಹೌದು ಅಂದಹಾಗೆ ತಂದೆ ಪ್ರಾಣ ಪಕ್ಷಿ ಹಾರಿಹೋಗ್ತಾ ಇದ್ದಂತೆ ಒಬ್ಬೊಬ್ಬರ ಬಳಿ ಒಂದೊಂದು ಕಥೆ ಕಟ್ಟಿದ್ದಾನೆ.ತಂದೆ ತಾಯಿ ಜಗಳದಲ್ಲಿ ನಾನು ಬಿಡಿಸುವ ವೇಳೆ ತಂದೆಗೆ ಮಚ್ಚು ತಾಗಿ ಗಾಯವಾಗಿ ತೀರಿಕೊಂಡ್ರು ಎಂದು ಕೆಲವರ ಬಳಿ ಹೇಳಿದ್ದನಂತೆ.ಇನ್ನು ಕೆಲವರ ಬಳಿ ತಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದ.

ಆರೋಪಿಯ ಪುಂಕಾನು ಪುಂಕ ಕಥೆ ಕೇಳಿದ್ದವರಿ ನಿಜವೆಂದು ಕೆಲವರು ಮಂಜುನಾಥ್ ಶವ ಸಂಸ್ಕಾರಕ್ಕೆ ಸಿದ್ದತೆ ಮಾಡ್ಕೊಂಡಿದ್ರು.ಎಲ್ಲಾ ಪದ್ದತಿಯನ್ನು ಮುಗಿಸಿದ್ರು ಇನ್ನೇನು ಶವ ಸಂಸ್ಕಾರ ಆಗ್ಬೇಕು ಎನ್ನುವಷ್ಟರಲ್ಲೆ ಸಿಕ್ಕಿತ್ತು ಟ್ವಿಸ್ಟ್. ಗುಟ್ಟಾಗಿ ಕೊಲೆಯನ್ನು ಮುಚ್ಚಿಹಾಕುವ ಸಂಚು ಮಾಡಿದ್ದ ಕೊಲೆಗಡುಕನ ಫ್ಲಾನ್ ಫ್ಲಾಪ್ ಆಗಿತ್ತು. ಯಾರೋ ಕೊಟ್ಟ ಮಾಹಿತಿ ಮೇರಗೆ ಆಲ್ದೂರು ಸರ್ಕಲ್ ಇನ್ಸಪೆಕ್ಟರ್ ಸೋಮೆಗೌಡ ಟೀಂ ಎಂಟ್ರಿಕೊಟ್ಟಿತ್ತು ಸದ್ದಿಲ್ಲದೇ ಡೌಟ್ ನಲ್ಲಿ ಮಗನನ್ನು ಎತ್ತಾಕೊಂಡು ಬಂದ ಪೊಲೀಸರು ತಮ್ಮದೇ ಶೈಲಿಯಲ್ಲಿ ಮಂಜುನಾಥ್ ಸಾವಿನ ರಹಸ್ಯ ಬೇಧಿಸಿದ್ರು. ಸದ್ಯ ಕಥೆ ಕಟ್ಟಿ ತಂದೆಯನ್ನು ಇಲ್ಲವಾಗಿಸಿದ ಪಾಪಿ ಮಗನ ಕೃತ್ಯವನ್ನು ಬಯಲಿಗೇಳೆದ ಪೊಲೀಸರ ಕೆಲಸ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.