ಕರಾಟೆಯಲ್ಲಿ ನಾಪೋಕ್ಲುವಿನ ಅಂಕುರ್ ಅಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕರಾಟೆಯಲ್ಲಿ  ನಾಪೋಕ್ಲುವಿನ  ಅಂಕುರ್ ಅಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ಚೆನ್ನೈನ ಐಸಿಎಫ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ 27ನೇ ಅಂತಾರಾಷ್ಟ್ರೀಯ ಮಹಾತ್ಮ ಗಾಂಧಿ ಕರಾಟೆ ಪಂದ್ಯಾವಳಿಯಲ್ಲಿ ನಾಪೋಕ್ಲುವಿನ ಅಂಕುರ್ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

 ಶಾಲೆಯ ವಿದ್ಯಾರ್ಥಿಗಳಾದ ವಿಹಾನ್ ಉತ್ತಪ್ಪ ಕರಾಟೆಯ ಕುಮಿಟೆ ವಿಭಾಗದಲ್ಲಿ ಪ್ರಥಮ, ಕಟ್ಟಾಸ್ ನಲ್ಲಿ ದ್ವಿತೀಯ,ಕವನ್ ಕಾರ್ಯಪ್ಪ ಕುಮಿಟೆಯಲ್ಲಿ ಪ್ರಥಮ,ಕಟ್ಟಾಸ್ ನಲ್ಲಿ ದ್ವಿತೀಯ, ಬವಿತ್ ರೈ ಕುಮಿಟೆ ಯಲ್ಲಿ ತೃತೀಯ, ಕಟ್ಟಾಸ್ ನಲ್ಲಿ ತೃತೀಯ, ತಮಾನ್ ಅಪ್ಪಯ್ಯ ಕುಮಿಟೆಯಲ್ಲಿ ತೃತೀಯ ಕಟ್ಟಾಸ್ ನಲ್ಲಿ ತೃತೀಯ, ಕಾರ್ಯಪ್ಪ, ಮೊಹಲ್, ರಿಶಿಕ್ ನಾಣಯ್ಯ ,ಅನಿಕ್ಕ್ ಜೈನ್. ಖದೀಜತ್ ನಶ್ವ ಕಟ್ಟಾಸ್ ನಲ್ಲಿ ತೃತೀಯ ಸ್ಥಾನಗಳಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಇವರು ಕರಾಟೆ ಮಾಸ್ಟರ್ ಎ. ಎಂ.ಶಿಹಾನ್,ಮುಹಮ್ಮದ್ ಇಕ್ಬಾಲ್ ಅವರಿಂದ ಕೋಫು ಕಾನ್ ಶಿತೋರಿಯು ಕರಾಟೆ ಸ್ಕೂಲ್ ನಲ್ಲಿ ತರಬೇತಿ ಪಡೆದು ಕೊಂಡಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಅಧ್ಯಕ್ಷರಾದ ರಾಜ ಚರ್ಮಣ, ಕಾರ್ಯದರ್ಶಿ ರತ್ನಾ ಚರ್ಮಣ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.