ಮೂರು ದಿನಗಳ ಹಿಂದೆ ಕೊಡಗು-ಕಾಸರಗೋಡು ಗಡಿಯಲ್ಲಿ ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತ ದೇಹ ಪತ್ತೆ

ಮೂರು ದಿನಗಳ ಹಿಂದೆ ಕೊಡಗು-ಕಾಸರಗೋಡು ಗಡಿಯಲ್ಲಿ ಬೈಕ್  ಸಮೇತ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತ ದೇಹ ಪತ್ತೆ

ಮಡಿಕೇರಿ:ಕೊಡಗು-ಕೇರಳ ಗಡಿಯ ಮಂಜಡ್ಕ ನದಿಯಲ್ಲಿ ಮೂರು ದಿನಗಳ ಹಿಂದೆ ಯುವಕ ಕೊಚ್ಚಿಹೋಗಿತ್ತು,ಇದೀಗ ಪಾಣತ್ತೂರು ಬಳಿ ನದಿಯಲ್ಲಿ ದೇಹ ಪತ್ತೆಯಾಗಿದೆ. 3 ದಿನಗಳ ಹಿಂದೆ ಮಂಜಡ್ಕ ನದಿಯಲ್ಲಿ ಬೈಕ್‌ ಸಮೇತ ಕೊಚ್ಚಿ ಹೋಗಿದ್ದ ದುರ್ಗಪ್ಪ (19) ಎಂಬ ಯುವಕನಿಗಾಗಿ ಶೋಧ ನಡೆಸಿದ್ದ ಕೇರಳ ಅಗ್ನಿಶಾಮಕ, ಪೊಲೀಸ್ , ಎನ್. ಡಿ. ಆರ್. ಎಫ್, ಸ್ಥಳೀಯರು ಭಾಗವಹಿಸಿದ್ದರು. ಬೆಳಗಾವಿ ಜಿಲ್ಲೆಯ ಶಿಂಧೋಗಿ ಮೂಲದ ದುರ್ಗಪ್ಪ ಇದೀಗ ನದಿಯಲ್ಲಿ ಪತ್ತೆಯಾಗದ್ದಾನೆ‌. ಕಾಸರಗೋಡು ಜಿಲ್ಲೆಯ ಮಂಜಡ್ಕ ಗ್ರಾಮದಲ್ಲಿ ಘಟನೆ ನಡೆದಿದ್ದು, ರಾಜಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.