ತಂದೆಯನ್ನೇ ಕೊಂದ ಮಗ ಅಂದರ್!

ಕುಶಾಲನಗರ: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಿಗೇರಿ ಗ್ರಾಮದ ಕಾವೇರಿ ಹೊಳೆಯ ದಡದಲ್ಲಿ ದಿನಾಂಕ: 16-03-2025 ರಂದು ಮೃತ ದೇಹ ಸಿಕ್ಕಿದ್ದು, ವಿಚಾರಣೆ ಸಂದರ್ಭ ಸದರಿ ಮೃತ ವ್ಯಕ್ತಿಯು ಕೂಡುಮಂಗಳೂರು ಗ್ರಾಮದ ನಿವಾಸಿ ಮಂಜಣ್ಣ ಎಂಬುದಾಗಿ ತಿಳಿದು ಬಂದಿರುತ್ತದೆ. ಮಂಜಣ್ಣ ರವರು ಕೌಟುಂಬಿಕ ಸಮಸ್ಯೆಯಿಂದ ಪತ್ನಿ ಮತ್ತು ಮಕ್ಕಳಿಂದ ಬೇರೆಯಾಗಿ ಒಬ್ಬರೆ ಕೂಡುಮಂಗಳೂರು ಗ್ರಾಮದಲ್ಲಿನ ಮನೆಯಲ್ಲಿ ವಾಸವಿರುವುದು ಮತ್ತು ಸುಮಾರು 14 ವರ್ಷಗಳ ಹಿಂದೆ ಕಾಫಿಕ್ಯೂರಿಂಗ್ ಕೆಲಸ ಮಾಡುವ ಸಂದರ್ಭ ಆಕಸ್ಮಿಕವಾಗಿ ಮಿಷನ್‌ಗೆ ಎಡ ಕಾಲು ಸಿಲುಕಿ ತುಂಡಾಗಿದ್ದು, ನಡೆಯಲು ಕಷ್ಟಸಾಧ್ಯವಾಗಿದ್ದರೂ ಸಹ ಚಿಕ್ಕಬೆಟ್ಟಗೇರಿಗೆ ತೆರಳಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಮೃತ ಮಂಜಣ್ಣ ರವರ ಪತ್ನಿ ಅನುಮಾನ ವ್ಯಕ್ತ ಪಡಿಸಿ ದೂರು ನೀಡಿರುವ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 194(3) (iv) ಬಿ.ಎನ್.ಎಸ್.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿ ಪತ್ತೆಗಾಗಿ ಚಂದ್ರಶೇಖರ್.ಪಿ, ಡಿಎಪಿ, ಸೋಮವಾರಪೇಟೆ ಉಪವಿಭಾಗ, ದಿನೇಶ್ ಕುಮರ್, ಸಿಪಿಐ, ಕುಶಾಲನಗರ ವೃತ್ತ, ರಾಮಚಂದ್ರ ಎನ್. ಪಿಎಸ್‌ಐ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 19-07-2025 ರಂದು ಮೃತ ಮಂಜಣ್ಣ ರವರ ಮಗನಾದ ಆರೋಪಿ ಚಂದ್ರಶೇಖರ ಕೆ.ಎಂ.(28) .6.00, 28 : 61(2), 137(2), 103(1), 238 / 3(5) BNS ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಮೃತ ಮಂಜಣ್ಣ ರವರ ಹಣ ಮತ್ತು ಆಸ್ತಿಯ ಸಲುವಾಗಿ ಚಂದ್ರಶೇಖರ್ ತನ್ನ ಸ್ನೇಹಿತರೊಂದಿಗೆ ಕೊಲೆ ಮಾಡುವ ಉದ್ದೇಶದಿಂದ ಮೊದಲೇ ರೂಪಿಸಿದ ಸಂಚಿನಂತೆ ದಿನಾಂಕ: 14-03-2025 ರಂದು ಅಲ್ಟೋ ಕಾರಿನಲ್ಲಿ ಕೂಡುಮಂಗಳೂರು ಗ್ರಾಮದಲ್ಲಿನ ಮನೆಯಿಂದ ಮಂಜಣ್ಣ ರವರನ್ನು ಬಲವಂತದಿಂದ ಎತ್ತಿಕೊಂಡು ಕಾರಿನಲ್ಲಿ ಕೂರಿಸಿಕೊಂಡು ಹೋಗುವಾಗ ಮಂಜಣ್ಣ ರವರು ಕೂಗಿದಾಗ ಚಂದ್ರಶೇಖರ್ & ಸ್ನೇಹಿತರು ಹಲ್ಲೆ ನಡೆಸಿದ್ದು, ಪ್ರಜ್ನೆ ತಪ್ಪಿರುವ ಮಂಜಣ್ಣ ಮೃತಪಟ್ಟಿರುತ್ತಾನೆ ಎಂಬುದಾಗಿ ಭಾವಿಸಿ ದೇಹವನ್ನು ಚಿಕ್ಕಬೆಟ್ಟಗೇರಿಯಲ್ಲಿ ಹರಿಯುತ್ತಿರುವ ಕಾವೇರಿ ಹೊಳೆಯಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುತ್ತದೆ ಹಾಗೂ ಸದರಿ ಪ್ರಕರಣದ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ.