ಕೆಆರ್.ಎಸ್ ಹಿನ್ನೀರಲ್ಲಿ ಮುಳುಗಿ ಮೂವರು ಮೂವರು ನರ್ಸಿಂಗ್ ವಿದ್ಯಾರ್ಥಿಗಳ ಸಾವು

ಮೈಸೂರು: ಕೆ.ಆರ್.ಎಸ್ ಹಿನ್ನೀರು ಪ್ರದೇಶಕ್ಕೆ ಪ್ರವಾಸಕ್ಕಾಗಿ ಆಗಮಿಸಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೈಸೂರು ತಾಲೂಕಿನ ಮೀನಾಕ್ಷಿಪುರ ಗ್ರಾಮದ ಬಳಿ ಕೆ.ಆರ್.ಎಸ್. ಅಣೆಕಟ್ಟೆಯ ಹಿನ್ನೀರು ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಮಂಡ್ಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಶಾಂತ್, ಸಿದ್ದ ಮತ್ತು ಕೃಷ್ಣ ಮೃತರು. ವಾರಾಂತ್ಯವನ್ನು ಹಿನ್ನೀರು ಪ್ರದೇಶದಲ್ಲಿ ಮೋಜು- ಮಸ್ತಿಯೊಂದಿಗೆ ಕಳೆಯಲು ತೀರ್ಮಾನಿಸಿದ್ದ ವಿದ್ಯಾರ್ಥಿಗಳು, ಭಾನುವಾರ ಬೆಳಗ್ಗೆ ಮೀನಾಕ್ಷಿಪುರಕ್ಕೆ ಆಗಮಿಸಿದ್ದರು. ಈಜಲು ನೀರಿಗೆ ಇಳಿದಿದ್ದು, ಅಚಾನಕ್ಕಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಗಂಟೆಗಟ್ಟಲೇ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದರು. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.