ವಿಜಯಪುರ: ಎಳನೀರು ಅಂಗಡಿಯ ಆಂಟಿಯಿಂದ ಬ್ಯಾಂಕ್ ಮ್ಯಾನೇಜರ್‌ಗೆ ಹನಿಟ್ರ್ಯಾಪ್; ಅಮ್ಮನ ವಿಡಿಯೋ ಗೆ ಮಗನೇ ಸೂತ್ರದಾರ!
ವಿಜಯಪುರ: ಜಿಲ್ಲೆಯ ಇಂಡಿಯಲ್ಲಿ ತಾಯಿ ಹಾಗೂ ಮಗ ಸೇರಿ ಬ್ಯಾಂಕ್ ಮ್ಯಾನೇಜರ್‌ಗೆ ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂ. ಸುಲಿಗೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ದೈಹಿಕ ಸಂಬಂಧದ ವಿಡಿಯೋ ತೆಗೆದು 10 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ದೂರು ದಾಖಲಾದ ಬಳಿಕ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಇದು ಸರಣಿ ಹನಿಟ್ರ್ಯಾಪ್ ಪ್ರಕರಣಗಳ ಭಾಗವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಎಳನೀರು ಮಾರುತ್ತಿದ್ದ 44 ವರ್ಷದ ಮಹಿಳೆ ತನ್ನ ಮಗನನ್ನೇ ಬಳಸಿಕೊಂಡು ಸರ್ಕಾರಿ ಬ್ಯಾಂಕ್ ಮ್ಯಾನೇಜರ್‌ಗೆ ಹನಿಟ್ರ್ಯಾಪ್ ಮಾಡಿ ಸುಲಿಗೆಗೆ ಮುಂದಾಗಿದ್ದಾಳೆ.
ನವೆಂಬರ್ 1ರಂದು ಮಹಿಳೆ ಮ್ಯಾನೇಜರ್ ರೊಂದಿಗೆ ಪರಿಚಯ ಬೆಳೆಸಿ ತನ್ನ ಗೆಳೆತಿಯ ಮನೆಯಲ್ಲಿ ಏಕಾಂತಕ್ಕೆ ಕರೆಸಿ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದಾಳೆ. ಈ ವೇಳೆ ಮನೆಯ ಕಿಟಕಿಯಲ್ಲಿ ಮೊಬೈಲ್ ಫೋನ್ ಇಟ್ಟಿರುವುದು ಮ್ಯಾನೇಜರ್ ಗಮನಕ್ಕೆ ಬಂದಿದ್ದರೂ, ‘ಫೋನ್ ಕೆಟ್ಟಿದೆ’ ಎಂದು ಸುಳ್ಳು ಹೇಳಿದ್ದಾಳೆ. ಬಳಿಕ ನವೆಂಬರ್ 5ರಂದು ಕರೆ ಮಾಡಿ, “ನಾವು ಇಬ್ಬರೂ ಏಕಾಂತದಲ್ಲಿದ್ದ ದೃಶ್ಯ ಯಾರೋ ವಿಡಿಯೋ ಮಾಡಿದ್ದಾರೆ, ಅವರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಿ” ಎಂದು ಕಥೆ ಕಟ್ಟಿದ್ದಾಳೆ.
ಈ ನಂತರ ಮಹಿಳೆಯ ಅಳಿಯ ಮಹೇಶ್ ಬಗಲಿ ಮತ್ತು ತೌಶೀಫ್ ಖುರೇಷಿ ಎಂಬುವವರು ಪತ್ರಕರ್ತರೆಂದು ಹೇಳಿ ಮ್ಯಾನೇಜರ್‌ನ್ನು ಸಂಪರ್ಕಿಸಿ, 'ವೀಡಿಯೋ ನಮ್ಮ ಬಳಿ ಇದೆ, 10 ಲಕ್ಷ ಕೊಡಬೇಕು, ಇಲ್ಲವಾದರೆ ಸುದ್ದಿಮಾಧ್ಯಮಗಳಿಗೆ ಕೊಡುತ್ತೇವೆ' ಎಂದು ಬೆದರಿಕೆ ಹಾಕಿದ್ದಾರೆ. ಈ ದಂಧೆಯಲ್ಲಿ ಮಹಿಳೆಯ ಸ್ವಂತ ಮಗ ಅಮುಲ್ ಕೂಡ ಸೇರಿದ್ದಾನೆಂಬುದು ತನಿಖೆಯಲ್ಲಿ ಕಂಡುಬಂದಿದೆ.
ಮ್ಯಾನೇಜರ್ ಇಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಮಹಿಳೆ, ಮಹೇಶ್, ತೌಶೀಫ್ ಪರಾರಿಯಾಗಿದ್ದಾರೆ. ಮಹಿಳೆಯ ಪುತ್ರ ಅಮುಲ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ.
