ವಿರಾಜಪೇಟೆ:ಪೊಲೀಸರ ಮೇಲೆ ಹಲ್ಲೆ ಪ್ರಕರಣ, ಆರೋಪಿಗಳು ಖುಲಾಸೆ! 15 ವರ್ಷಗಳ ಹಿಂದೆ ವಿರಾಜಪೇಟೆ ಸಮೀಪದ ಚಿಟ್ಟಡೆ ಗ್ರಾಮದಲ್ಲಿ ಏನಾಗಿತ್ತು ಗೊತ್ತೇ!

ವಿರಾಜಪೇಟೆ: ಸಮೀಪದ ಬೆಟೋಳಿ ಗ್ರಾಮದ ಚಿಟ್ಟಡೆಯಲ್ಲಿ ಪೋಲಿಸರು ಜೀಪಿನಲ್ಲಿ ಸರ್ಕಾರಿ ಕರ್ತವ್ಯಕ್ಕೆ ತೆರಳಿದ ಸಂದರ್ಭ, ಸುಮಾರು 26 ಜನ ಆರೋಪಿಗಳು ಅಕ್ರಮ ಕೂಟ ಸೇರಿಕೊಂಡು ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿ,. ಪೋಲಿಸ್ ಜೀಪನ್ನು ಅಡ್ಡ ಗಟ್ಟಿ, ಕರ್ತವ್ಯದಲ್ಲಿದ್ದ ಎ.ಎಸ್.ಐ ಡಿ.ವಿ. ಕಾರ್ಯಪ್ಪ ಹಾಗೂ ಇತರೆ 8 ಪೋಲಿಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೋಲಿಸ್ ಜೀಪನ್ನು ಜಖಂಗೊಳಿಸಿ ನಷ್ಟವನ್ನುಂಟುಮಾಡಿದ ಪ್ರಕರಣದ ಸಾಕ್ಷಿ ವಿಚಾರಣೆಯನ್ನು ನಡೆಸಿದ ವಿರಾಜಪೇಟೆ ಪ್ರಿನ್ಸಿಪಲ್ ನ್ಯಾಯಾಧೀಶರಾದ ಪ್ರದೀಪ್ ಪೋತೆದಾರ್ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.
ವಿವರ:
ದಿನಾಂಕ : l12-04-2010 ರಂದು ಚಿಟ್ಟಡೆ ಗ್ರಾಮಕ್ಕೆ ಪ್ರಕರಣವೊಂದರ ಸಂಬಂಧ ಆರೋಪಿಗಳ ಪತ್ತೆಗಾಗಿ ತೆರಳಿದ ಸಂದರ್ಭ ಚಿಟ್ಟಡೆ ಗ್ರಾಮಸ್ಥರಾದ ವೈ.ಇ. ರಫೀಕ್ ಹಾಗೂ ಇತರೆ 25 ವ್ಯಕ್ತಿಗಳು ಪೋಲಿಸರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಸುದೀರ್ಘ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿಗಳ ವಿರುದ್ಧ ಪೋಲಿಸರು ಸಾಕ್ಷ್ಯಾಧಾರವನ್ನು ಸಾಭೀತುಪಡಿಸುವಲ್ಲಿ ವಿಫಲವಾಗಿದ್ದಾರೆಯೆಂದು ತೀರ್ಮಾನಿಸಿ ಆರೋಪಿಗಳನ್ನು ಬಿಡುಗಡೆಗೊಳಿಸಿದೆ. ಆರೋಪಿಗಳ ಪರವಾಗಿ ವಕೀಲರಾದ ಡಿ.ಸಿ. ಧ್ರುವ ಅವರು ವಾದಿಸಿದ್ದರು.