ವಿರಾಜಪೇಟೆ: ನವಜ್ಯೋತಿ ಸಂಘದ ಅಧ್ಯಕ್ಷರಾಗಿ ಜಾಕೀರ್ ಹುಸೈನ್, ಕಾರ್ಯದರ್ಶಿಯಾಗಿ ಸುನೀಶ್ ಆಯ್ಕೆ

ವಿರಾಜಪೇಟೆ: ನವಜ್ಯೋತಿ ಸಂಘದ ಅಧ್ಯಕ್ಷರಾಗಿ ಜಾಕೀರ್ ಹುಸೈನ್, ಕಾರ್ಯದರ್ಶಿಯಾಗಿ ಸುನೀಶ್ ಆಯ್ಕೆ

ವಿರಾಜಪೇಟೆ: ನಗರದಲ್ಲಿ ಸುದೀರ್ಘ ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನವಜ್ಯೋತಿ ಸಂಘಕ್ಕೆ ನೂತನ ಆಡಳಿತ ಮಂಡಳಿ ರಚನೆಗೊಂಡಿದ್ದು, ನವಜ್ಯೋತಿ ಸಂಘ (ರಿ) ನೆಹರು ನಗರ ವಿರಾಜಪೇಟೆ ಆಶ್ರಯದಲ್ಲಿ ಸಂಘದ ಕಛೇರಿಯಲ್ಲಿ 2025-26 ನೇ ಸಾಲೀನ ಆಡಳಿತ ಮಂಡಳಿ ರಚನೆ ಮತ್ತು ನಿರ್ಗಮಿತ ಅಧ್ಯಕ್ಷರಾದ ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ 32 ನೇ ವರ್ಷದ ಮಹಾಸಭೆ ನಡೆಯಿತು. ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಸನ್ನ ಅವರು ಸಂಘ ಸ್ಥಾಪನೆಗೊಂಡು 31 ವರ್ಷ ಕಳೆದಿದೆ. ಸಾಮಾಜಿಕ ಕಳಕಳಿಯೊಂದಿಗೆ ಸಂಘ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದುವರೆದಿದೆ. ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಜನಸಮಾನ್ಯರಲ್ಲಿ ಉತ್ತಮ ಅಭಿಮತವಿದೆ. ಸಂಘದಲ್ಲಿ ಸದಸ್ಯಬಲ ವಿರಳವಾಗಿದ್ದು ಹೆಚ್ಚಿಸುವ ಪ್ರಯತ್ನ ಹಾಗೂ ಯುವ ಮಿತ್ರರನ್ನು ಸಂಘದ ಸದಸ್ಯರನ್ನಾಗಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಮುಂದಾಗಬೇಕು ಎಂದು ಹೇಳಿದರು.

 ನವಜ್ಯೋತಿ ಸಂಘ (ರಿ) 2025-26 ನೇ ಸಾಲೀನ ನೂತನ ಅಡಳಿತ ಮಂಡಳಿ ರಚನೆಗೊಂಡು ಅಧ್ಯಕ್ಷರಾಗಿ ಜಾಕೀರ್ ಹುಸೈನ್, ಪ್ರಧಾನ ಕಾರ್ಯಧರ್ಶಿಯಾಗಿ ಸುನೀಶ್ ಜಿ.ಎಸ್, ಉಪದ್ಯಕ್ಷರಾಗಿ ಬ್ಲೇಜಿ ಸಿಕ್ವೇರ, ಕೋಶಾಧಿಕಾರಿಗಳಾಗಿ ಧನು ಸಿ.ಎಂ ಗೌ.ಅದ್ಯಕ್ಷರಾಗಿ ಮರ್ವಿನ್ ಲೋಬೊ 21 ಮಂದಿ ನಿರ್ದೇಶಕರುಗಳಾಗಿ ಆಯ್ಕೆಗೊಂಡರು. ನವಜ್ಯೋತಿ ಸಂಘದ ಸದಸ್ಯರಾದ ಜ್ಯೂಡಿ ವಾಜ್ ಸ್ವಾಗತಿಸಿ ವಂದಿಸಿದರು. ಹಿರಿಯ ಮತ್ತು ಕಿರಿಯ ಸದಸ್ಯರು ಮಾಹಸಭೆಯಲ್ಲಿ ಹಾಜರಿದ್ದರು.