ವಿರಾಜಪೇಟೆ:70ರ ಪ್ರಾಯದ ವೃದ್ಧನಿಗೆ 20ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟ!
ವಿರಾಜಪೇಟೆ:: ಶಾಲೆಗೆ ತೆರಳುತಿದ್ದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಗೈದ 70ರ ವೃದ್ಧನಿಗೆ 20 ವರ್ಷಗಳ ಕಾರಗೃಹ ಶಿಕ್ಷೆ ಮತ್ತು 50. ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ ವಿರಾಜಪೇಟೆ ನ್ಯಾಯಾಲಯ. ಗೋಣಿಕೊಪ್ಪ ಮೈಸೂರಮ್ಮ ಕಾಲೋನಿ ನಿವಾಸಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಿವಂಗತ ತಂಗಪ್ಪನ್ ಎಂಬುವವರ ಪುತ್ರ ಪಿ.ಟಿ ಅಪ್ಪುಕುಟ್ಟಿ ( 70) ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಘಟನೆಯ ಸಾರಂಶ: ಗೋಣಿಕೊಪ್ಪ ಮೈಸೂರಮ್ಮ ಕಾಲೋನಿಯಲ್ಲಿ ಬಾಡಿಗೆ ಮನೆ ಪಡೆದುಕೊಂಡು ಕೂಲಿ ಜೀವನ ಸಾಗಿಸುತಿದ್ದ ಪರಿಶಿಷ್ಟ ಜಾತಿಗೆ ಸೇರಿದ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳು. ಕಾಲಕ್ರಮೇಣ ಮಕ್ಕಳ ಕಾಯಿಲೆಗೆ ತುತ್ತಾಗಿ ಮಕ್ಕಳ ತಾಯಿ ನಿಧನರಾಗುತ್ತಾರೆ.ನಂತರ ತಂದೆಗೆ ಮಕ್ಕಳ ಆರೈಕೆ ಕಷ್ಟ ಸಾಧ್ಯವಾಗುತ್ತದೆ.
ತಂದೆಗೆ ಕೂಲಿ ಕಾರ್ಮಿಕನಾಗಿ ಮಕ್ಕಳನ್ನು ಸಾಕುವುದು ಕಷ್ಟ ಎಂದು,ಹಿರಿಯ ಮಗಳನ್ನು ವಸತಿ ಶಾಲೆಯಲ್ಲಿ, ಈರ್ವರನ್ನು ಗೋಣಿಕೊಪ್ಪಲು ಶಾಲೆಗೆ ಸೇರಿಸಿದ್ದರು.ಇದೋಗ ಮೂರು ಮಕ್ಕಳು ತಾಯಿ ಇಲ್ಲದೆ ತಬ್ಬಲಿಯಾಗಿದ್ದಾರೆ. ಮಕ್ಕಳು ರಕ್ತ ಸಂಭಂದಿಗಳ ಆರೈಕೆಯಲ್ಲಿದ್ದಾರೆ. ಆರೋಪಿತ ಅಪ್ಪುಕುಟ್ಟ ಮೈಸೂರಮ್ಮ ಕಾಲೋನಿಯಲ್ಲಿ ಪುಟ್ಟ ಗೂಡು ಅಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದನು. ತಾ. 16-1-2022 ರಂದು ಶಾಲೆಯಿಂದ ಮನೆಗೆ ಹಿಂದುರುಗುತಿದ್ದ 08 ವರ್ಷದ ಬಾಲಕಿಯನ್ನು (ಕಾನೂನು ತೊಡುಕು ಇರುವುದರಿಂದ ಬಾಲಕಿಯ ಮಾಹಿತಿ ಬಹಿರಂಗಪಡಿಸಲು ಅಸಾಧ್ಯ) ಆರೋಪಿ ಅಂಗಡಿ ಕರೆಸಿ ಸಿಹಿ ಮತ್ತು ಬನ್ನು ನೀಡಿ ಪುಸಲಾಯಿಸುತ್ತಾನೆ.
ನಂತರ ಸನಿಹದ ಸ್ವತ: ಮನೆಯಲ್ಲಿ ಟಿ.ವಿ ತೋರಿಸುವ ಆಸೆ ಹುಟ್ಟಿಸುತ್ತಾನೆ ಬಳಿಕ ಬಾಲಕಿಯನ್ನು ವಿವಸ್ತೃಗೊಳಿಸಿ ಅತ್ಯಾಚಾರ ಮಾಡಿ ಕಳುಹಿಸುತ್ತಾನೆ. ಸಂಜೆಯ ವೇಳೆಗೆ ಮನೆಗೆ ಬಂದ ತಾಯಿಯು ಕೋಣೆಯಲ್ಲಿ ಕಣ್ಣೀರುಯಿಡುತ್ತಾ ಕುಳಿತಿರುವ ಮಗಳನ್ನು ಕಂಡು ಕಾರಣ ಕೇಳುತ್ತಾಳೆ. ಸಂತ್ರಸ್ತ ಮಗಳು ಘಟನೆಯ ವಿವರವನ್ನು ತಿಳಿಸುತ್ತಾಳೆ. ಮನೆಯ ಸನಿಹದ ನಿವಾಸಿಗಳೊಂದಿಗೆ ಗೋಣಿಕೊಪ್ಪಲು ಠಾಣೆಯಲ್ಲಿ ಆರೋಪಿಯ ಮೇಲೆ ಕಲಂ 376(2) (J) (N)376,AB ಐ.ಪಿಸಿ ಮತ್ತು ಕಲಂ 5 (L), (M)ರೆ/ವಿ 6(1) ಪೊಕ್ಸೊ ಕಾಯ್ದೆ ಮತ್ತು ಕಲಂ3 (2)(V) SC|ST (POA)ACT 1989ರಡಿ ಪ್ರಕರಣ ದಾಖಲಾಗುತ್ತದೆ.
ಪ್ರಕರಣ ಗಂಭೀರತೆಯನ್ನು ಅರಿತು ವಿರಾಜಪೇಟೆ ಉಪ ವಿಭಾಗದ ಪೊಲೀಸು ಉಪ ಅಧೋಕ್ಷಕರಾದ ಎಸ್.ನಿರಂಜನ್ ರಾಜೇ ಅರಸ್ ಅವರು ಪರಿಶಿಷ್ಟ ಜಾತಿ ,ಪರಿಶಿಷ್ಟ ವರ್ಗ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದಾಖಸಿದ್ದ ಪ್ರಕರಣವನ್ನು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸುತ್ತಾರೆ. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿರಾಜಪೇಟೆಯಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸುತ್ತಾರೆ.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌ. ನ್ಯಾಯಾಧೀಶರಾದ ಎಸ್. ನಟರಾಜು ಅವರು ಆರೋಪಿಯ ಮೇಲೆ ದಾಖಲಾದ ಪ್ರಕರಣಗಳು ಸಾbíತಾದ ಹಿನ್ನಲೆಯಲ್ಲಿ ಆರೋಪಿ ಪಿ.ಟಿ. ಅಪ್ಪುಕುಟ್ಟ ಪೊಕ್ಸೊ ಕಾಯ್ದೆಯ ಅಡಿಯಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50ಸಾವಿರ ರೂ ದಂಡ ವಿಧಿಸಿದ್ದು ದಂಡ ಕಟ್ಟಲು ತಪ್ಪಿದಲ್ಲಿ 06 ತಿಂಗಳ ಸಾದಾ ಜೈಲುವಾಸ ಅನುಭವಿಸುವಂತೆ ತೀರ್ಪು ನೀಡಿತು. ಸಂತ್ರಸ್ಥೆ ಬಾಲಕಿಗೆ 02 ಲಕ್ಷ ಹಣವನ್ನು ಸರ್ಕಾರದಿಂದ ಪರಿಹಾರ ರೂಪದಲ್ಲಿ ಕೊಡುವಂತೆ ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಯಾಸೀನ್ ಅಹಮದ್ ಅವರು ವಾದ ಮಂಡಿಸಿದ್ದಾರೆ.
ವರದಿ: ಟಿ.ಜೆ ಕಿಶೋರ್ ಕುಮಾರ್ ಶೆಟ್ಟಿ
