ವಿರಾಜಪೇಟೆ: ಸ್ವಂತ ವೆಚ್ಚದಲ್ಲಿ ಟಾರ್ಪಲ್ ವಿತರಿಸಿದ ಶಾಸಕ ಎ.ಎಸ್ ಪೊನ್ನಣ್ಣ

ವಿರಾಜಪೇಟೆ: ಸ್ವಂತ ವೆಚ್ಚದಲ್ಲಿ ಟಾರ್ಪಲ್ ವಿತರಿಸಿದ ಶಾಸಕ ಎ.ಎಸ್ ಪೊನ್ನಣ್ಣ

ವಿರಾಜಪೇಟೆ :ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಕಡಂಗಮರೂರು ಭಾಗದ ಕಾಲೋನಿ ನಿವಾಸಿಗಳಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಟಾರ್ಪಲ್ ಗಳನ್ನು ವಿತರಿಸಿದರು ಕ್ಷೇತ್ರಾದ್ಯಂತ, ಮಳೆಯಿಂದ ತೊಂದರೆಗೀಡಾಗಿರುವ ಕಾರಣದಿಂದ ತಮ್ಮ ವೈಯುಕ್ತಿಕ ವೆಚ್ಚದಲ್ಲಿ ಶಾಸಕರು ಈ ಟಾರ್ಪೋಲ್ ಗಳನ್ನು ವಿತರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಕಡಂಗಮರೂರು ಬೂತ್ ಅಧ್ಯಕ್ಷರಾದ ಮಂಡೆಪಂಡ ರೋಷನ್, ಬಾಲಟಿಲಂಡ ರಂಜಿ, ಮಂಡೆಟೀರ ಅನಿಲ್, ಮಹಿಳಾ ಘಟಕದ ಅಧ್ಯಕ್ಷರಾದ ಕಾವೇರಮ್ಮ, ಕಾಂಗಿರ ಸತೀಶ್, ಕಾಂಗಿರ ರವಿ ಮಾಚಯ್ಯ, ಮಲಂಡ ಜಗದೀಶ್, ಕೆದಮುಳ್ಳೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಡಿಕೇರಿಯಂಡ ಮಹೇಶ್, ಪಂಚಾಯಿತಿ ಅಧ್ಯಕ್ಷರಾದ ಜೇಫ್ರಿ ಉತ್ತಪ್ಪ, ಕೆಡಿಪಿ ಸದಸ್ಯರಾದ ಮಾಳೆಟೀರ ಪ್ರಶಾಂತ್, ಬಟಾಕಳಂಡ ರಾಜ, ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.