ಅನಾಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ವಿರಾಜಪೇಟೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್ ನೇತೃತ್ವದ ತಂಡ

ವಿರಾಜಪೇಟೆ:ನಗರದಲ್ಲಿ ಅನಾಥ ಬಡ ವ್ಯಕ್ತಿಯೊಬ್ಬರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಮಾಹಿತಿ ಬಂದಾಗ ತಕ್ಷಣ ಸ್ಪಂದಿಸಿದ ವಿರಾಜಪೇಟೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಅವರ ನೇತೃತ್ವದಲ್ಲಿ ನಗರದ ಸಮಾಜಸೇವಕರಾದ ಮೊಹಮ್ಮದ್ ನಯಾಜ್ ಝಿಯಾಉಲ್ಲಾ ಮತ್ತು ಜುನೈದ್ ಸೇರಿ ಅವರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.