ಗಾಳಿಬೀಡು:ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ ಮಂತರ್ ಗೌಡ
ಮಡಿಕೇರಿ:ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಗೂಡಿನಿಂದ ಮಳೆಹಾನಿ ನಿರಾಶ್ರಿತರಿಗೆ ನಿರ್ಮಿಸಲ್ಪಟ್ಟ ವಸತಿ ಸಮುಚ್ಚಯದ ಕಡೆಗೆ ಸುಮಾರು 50ಲಕ್ಷ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ನೂತನ ಕಾಂಕ್ರೀಟ್ ರಸ್ತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾಕ್ಟರ್ ಮಂತರ್ ಗೌಡರವರು ಉದ್ಘಾಟಿಸಿದರು.ದಶಕಗಳಿಂದ ಈಡೇರದ ಬೇಡಿಕೆಯನ್ನು ಈಡೇರಿಸಿದ ಮಂತರ್ ಗೌಡರವರನ್ನು ಸಮುಚ್ಚಯದ ನಿವಾಸಿಗಳ ಪರವಾಗಿ ರವಿಯವರು ಸನ್ಮಾನಿಸಿದರು.
ಈ ಸಂಧರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎ ಹಂಸ, ಡಿ:ಸಿ:ಸಿ ಸದಸ್ಯರಾದ ಪುಷ್ಪಾ ಪೂಣಚ್ಚ, ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಹರಿಪ್ರಸಾದ್ ಕೋಚನ, ಬ್ಲಾಕ್ ಕಾಂಗ್ರೆಸ್ ಖಜಾಂಚಿ ರೋಷನ್ ಕೊಂಬಾರನ, ಪಂಚಾಯತ್ ರಾಜ್ ಅಧ್ಯಕ್ಷರಾದ ತೆನ್ನೀರ ಮೈನಾ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸುಭಾಷ್ ಆಳ್ವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೋಲುಮುಡಿಯನ ಅನಂತಕುಮಾರ್, ಕೊಂಬಾರನ ಗಣಪತಿ, ಹಿರಿಯರಾದ ಕೇಶವಾನಂದ ಯಾಲದಳ ಹಾಗೂ ವಸತಿ ಸಮುಚ್ಚಯದ ನಿವಾಸಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.