IPL 2025:ಗಿಲ್&ಸಾಯಿ ಸುದರ್ಶನ್ ಬೊಂಬಾಟ್ ಆಟ: ಗುಜರಾತ್ ತಂಡಕ್ಕೆ ಭರ್ಜರಿ ಗೆಲುವು

ದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಹಾಗೂ ಗುಜರಾತ್ ನಡುವಿನ ಪಂದ್ಯದಲ್ಲಿ ಗುಜರಾತ್ ತಂಡವು, ತಂಡದ ನಾಯಕ ಗಿಲ್ ಹಾಗೂ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅವರ ಬೊಂಬಾಟ್ ಆಟದಿಂದ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್ ಸನಿಹಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.ಡೆಲ್ಲಿ ಕ್ಯಾಪಿಟಲ್ಸ್ ತಂಡವು ನೀಡಿದ್ದ 200 ರನ್ ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ ಒಂದು ಓವರ್ ಬಾಕಿ ಇರುವಂತೆ ಗುರಿ ತಲುಪಿದೆ.ಗುಜರಾತ್ ತಂಡದ ಪರವಾಗಿ ಸಾಯಿ ಸುದರ್ಶನ್ 108 ಹಾಗೂ 94 ರನ್ ಗಳಿಸಿದರು.ಡೆಲ್ಲಿ ತಂಡದ ಪರವಾಗಿ ಕನ್ನಡಿಗ ಕೆ.ಎಲ್ ರಾಹುಲ್ ಔಟ್ ಆಗದೆ 112 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು.
What's Your Reaction?






