SPL ಫುಟ್ಬಾಲ್ ಲೀಗ್: ಮಾರ್ಕೆಟ್ ಬಾಯ್ಸ್ ವಿನ್ನರ್ಸ್: ಲಂಡನ್ ಎಫ್.ಸಿ ರನ್ನರ್ಸ್

SPL ಫುಟ್ಬಾಲ್ ಲೀಗ್: ಮಾರ್ಕೆಟ್ ಬಾಯ್ಸ್ ವಿನ್ನರ್ಸ್:  ಲಂಡನ್ ಎಫ್.ಸಿ ರನ್ನರ್ಸ್
SPL ಫುಟ್ಬಾಲ್ ಲೀಗ್: ಮಾರ್ಕೆಟ್ ಬಾಯ್ಸ್ ವಿನ್ನರ್ಸ್:  ಲಂಡನ್ ಎಫ್.ಸಿ ರನ್ನರ್ಸ್

ಸಿದ್ದಾಪುರ: ಇಲ್ಲಿಯ ಸ್ಟ್ರೈಕರ್ಸ್ ಎಡ್ಜ್ ಟರ್ಫ್ ಮೈದಾನದಲ್ಲಿ ನಡೆದ ಸಿದ್ದಾಪುರ ಪ್ರೀಮಿಯರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಾರ್ಕೆಟ್ ಬಾಯ್ಸ್ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಲಂಡನ್ ಎಫ್.ಸಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.10 ತಂಡಗಳ ನಡುವೆ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದ ಪ್ರಥಮಾರ್ಧದಲ್ಲಿ ಲಂಡನ್ ಎಫ್.ಸಿ ತಂಡದ ಮಿಸ್ಹಬ್ ಬಾರಿಸಿದ ಗೋಲಿನಿಂದಾಗಿ ಮುನ್ನಡೆ ಪಡೆದುಕೊಂಡಿತು. ದ್ವಿತೀಯಾರ್ಧದ ಕೊನೆಯ ನಿಮಿಷದಲ್ಲಿ ಮಾರ್ಕಟ್ ಬಾಯ್ಸ್ ತಂಡದ ಮುಸ್ತಫ ಗಳಿಸಿದ ಗೋಲಿನಿಂದಾಗಿ ಪಂದ್ಯ ಸಮಬಲವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಮಾರ್ಕಟ್ ಬಾಯ್ಸ್ ತಂಡ 2-1 ಗೋಲುಗಳ ಅಂತರದಲ್ಲಿ ಜಯಗಳಿಸಿದರು.

ಪಂದ್ಯಾವಳಿಯ ಉತ್ತಮ ಆಟಗಾರ ಹಾಗೂ ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಮಾರ್ಕಟ್ ಬಾಯ್ಸ್ ತಂಡದ ಎ.ಎಸ್ ಮುಸ್ತಫ, ಉತ್ತಮ ಗೋಲ್ ಕೀಪರ್ ಪವರ್ ಲೈನ್ ತಂಡದ ಅಜ್ನಾಸ್, ಉತ್ತಮ ಡಿಫೆಂಡರ್ ಮಾರ್ಕಟ್ ಬಾಯ್ಸ್ ತಂಡದ ಮುಹಿಸಿನ್, ಎಮರ್ಜಿಂಗ್ ಪ್ಲೆಯರ್ ಶಾಡೋ ಸ್ಟೈಕರ್ಸ್ ತಂಡದ ತಮೀಮ್, ಉತ್ತಮ ಸ್ಟೈಕರ್ ಲಂಡನ್ ಎಫ್.ಸಿ ತಂಡದ ಮಿಸ್ಹಾಬ್, ಲೆಜೆಂಡ್ ಪ್ಲೆಯರ್ ಪವರ್ ಲೈನ್ ತಂಡದ ಉಮ್ಮರ್ ಹಾಗೂ ಉತ್ತಮ ತಂಡ ಹಖೀಬತ್ ಎಫ್.ಸಿ ತಂಡ ಪಡೆದುಕೊಂಡರು. ಪಂದ್ಯಾವಳಿಯ ತೀರ್ಪುಗಾರರಾಗಿ ಅಮ್ಮತ್ತಿಯ ಶೇಷಪ್ಪ ಮತ್ತು ಒಂಟಿಯಂಗಡಿಯ ರದೀಶ್ ಕಾರ್ಯನಿರ್ವಹಿಸಿದರು.

ಫುಟ್ಬಾಲ್ ಪಂದ್ಯಾವಳಿಯನ್ನು ಗುಹ್ಯ ಅಗಸ್ತ್ಯೇಶ್ವರ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್ ವೆಂಕಟೇಶ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಸಿದ್ದಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಕೆ ಬಶೀರ್, ಗ್ರಾಮ ಪಂಚಾಯತಿ ಸದಸ್ಯರಾದ ಎ.ಎಸ್ ಹಸ್ಸನ್, ವಿ.ಕೆ ಜಾಫರ್ ಪ್ರಮುಖರಾದ ಸುಬ್ರಮಣಿ, ಸಲೀಂ, ಕೆ.ಯು ಮುಸ್ತಫ, ಹಾರಿಸ್, ನವೀದ್ ಖಾನ್ ಮತ್ತಿತರರು ಇದ್ದರು.