ಆಪರೇಷನ್‌ ಸಿಂಧೂರ: ಪಾಕಿಸ್ತಾನದ ಭಯೋತ್ಪಾದಕ ಮಾರಣ ಹೋಮ: ಭಾರತೀಯ ಸೇನೆಯ ಕಾರ್ಯಕ್ಕೆ ಹೆಚ್.ಎ ಹಂಸ ಕೊಟ್ಟಮುಡಿ ಶ್ಲಾಘನೆ

ಆಪರೇಷನ್‌ ಸಿಂಧೂರ: ಪಾಕಿಸ್ತಾನದ ಭಯೋತ್ಪಾದಕ ಮಾರಣ ಹೋಮ:  ಭಾರತೀಯ ಸೇನೆಯ ಕಾರ್ಯಕ್ಕೆ ಹೆಚ್.ಎ ಹಂಸ ಕೊಟ್ಟಮುಡಿ ಶ್ಲಾಘನೆ

ಮಡಿಕೇರಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಆಪರೇಷನ್ ಸಿಂಧೂರ ಮುಖಾಂತರ ಪಾಕಿಸ್ತಾನದ ಭಯೋತ್ಪಾದಕರ ಮಾರಣ ಹೋಮ ಮತ್ತು ಭಯೋತ್ಪಾದಕರ ನೆಲೆಯನ್ನು ದ್ವಂಸ ಗೊಳಿಸಿದ ಭಾರತ ಸೈನ್ಯಕ್ಕೆ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ ಹಂಸ ಕೊಟ್ಟಮುಡಿ ಶ್ಲಾಘಿಸಿದ್ದಾರೆ.ಭಾರತೀಯ ಸೇನೆಯ ಈ ಕಾರ್ಯ ಅತೀ ಅಗತ್ಯವಿದ್ದು,ಪಾಪಿ ಪಾಕಿಸ್ತಾನಕ್ಕೆ ಇನ್ನೂ ಕೂಡ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು.ಪಹಲ್ಗಾಮ್ ನಲ್ಲಿ ಅಮಾಯಕ ಜೀವಗಳನ್ನು ಬಲಿ ಪಡೆದ,ಪಾಕಿಸ್ತಾನದ ಭಯೋತ್ಪಾದಕರ ಸಂಪೂರ್ಣ ಧ್ವಂಸ ಮಾಡಬೇಕಾಗಿದೆ.

ದೇಶದ ಸಾರ್ವಭೌಮತೆ, ಅಖಂಡತೆಯನ್ನು ಕಾಪಾಡಲು ದೇಶದ ಪ್ರತಿಯೊಬ್ಬ ನಾಗರಿಕರು ತಯಾರಾಗಿದ್ದು, ಯುದ್ಧ ಸಂಭವಿಸಿದಲ್ಲಿ ಪಾಕಿಸ್ತಾನವನ್ನು ಸಂಪೂರ್ಣ ನಾಶ ಮಾಡಿ ಭಾರತದ ತೆಕ್ಕೆಗೆ ಅಗತ್ಯವಿರುವ ಸ್ಥಳವನ್ನು ವಶಪಡಿಸುವ ಕೆಲಸ ಆಗಬೇಕು. ಇನ್ನು ಮುಂದೆ ಪಾಕಿಸ್ತಾನ ಭಾರತದ ತಂಟೆಗೆ ಬಾರದ ರೀತಿಯಲ್ಲಿ ಕಾರ್ಯಾಚರಣೆ ಮಾಡಿ ಶತ್ರು ದೇಶಕ್ಕೆ ತಕ್ಕ ಪಾಠ ಮತ್ತು ಭಯೋತ್ಪಾದಕರಿಗೆ ಅಂತಿಮ ಮೊಳೆ ಹೊಡೆಯಲಿ ಭಾರತೀಯ ಸೇನೆ ಎಲ್ಲರಿಗೂ ಬಲಿಷ್ಠವಾಗಿದೆ ಎಂದು ಎಚ್.ಎ ಹಂಸ ಕೊಟ್ಟಮುಡಿ ಅಭಿಪ್ರಾಯಪಟ್ಟಿದ್ದಾರೆ.