ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಸಿಡಿಮದ್ದುಗಳ ಆರ್ಭಟ,ಕುಣಿದು ಕುಪ್ಪಳಿಸಿದ ಕ್ರೀಡಾಭಿಮಾನಿಗಳು

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಸಿಡಿಮದ್ದುಗಳ ಆರ್ಭಟ,ಕುಣಿದು ಕುಪ್ಪಳಿಸಿದ ಕ್ರೀಡಾಭಿಮಾನಿಗಳು

ಕೊಡಗು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಕ್ಷಣಕ್ಕೆ ಭಾನುವಾರ ಮಧ್ಯರಾತ್ರಿ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನ ಸಾಕ್ಷಿಯಾಗಿತ್ತು.ಒಂದೆಡೆ ಇಡೀ ಗ್ಯಾಲರಿಯಲ್ಲಿ ಜನಸ್ತೋಮ ಮತ್ತೊಂದೆಡೆ ಆಟಗಾರರ ಆಟದ ಕಾಲ್ಚಳಕದ ಮಧ್ಯೆ ಆಲ್ ಸ್ಟಾರ್ ತಂಡವು ನೆರೆದಿದ್ದ ಕ್ರೀಡಾ ಪ್ರೇಕ್ಷಕರಿಗೆ ಗೋಣಿಕೊಪ್ಪಲಿನ ದಸರಾ ಅನುಭವವನ್ನು ಮರುಕಳಿಸುವಂತೆ ಮಾಡಿದ್ದರು.ಮೈದಾನದಲ್ಲಿ ಪಟಾಕಿಗಳ ಆರ್ಭಟ ಒಂದೆಡೆಯಾದರೆ, ಡಿಜೆಗೆ ಇಡೀ ಗ್ಯಾಲರಿಯಲ್ಲಿ ಕುಳಿತಿದ್ದ ಜನತೆ ಕುಣಿದು ಕುಪ್ಪಳಿಸಿ ಕೊಡಗು ವರ್ಲ್ಡ್ ಫುಟ್ಬಾಲ್ ಪಂದ್ಯಾವಳಿಯನ್ನು ಎಂಜಾಯ್ ಮಾಡಿದರು. ಮಂಗಳೂರು,ಕೇರಳ,ಮೈಸೂರು,ಬೆಂಗಳೂರು ಹಾಗೂ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 20 ಸಾವಿರಕ್ಕೂ ಅಧಿಕ ಮಂದಿ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ವೀಕ್ಷಿಸಿದ್ದಾರೆ‌.