ಎ.ಎಸ್ ಪೊನ್ನಣ್ಣ ನೇತೃತ್ವದಲ್ಲಿ ಸಚಿವ ರಾಮಲಿಂಗರೆಡ್ಡಿ ಭೇಟಿಯಾದ ಕೊಡಗು ಕಾಂಗ್ರೆಸ್ ನಿಯೋಗ

ಎ.ಎಸ್ ಪೊನ್ನಣ್ಣ ನೇತೃತ್ವದಲ್ಲಿ ಸಚಿವ ರಾಮಲಿಂಗರೆಡ್ಡಿ  ಭೇಟಿಯಾದ ಕೊಡಗು ಕಾಂಗ್ರೆಸ್ ನಿಯೋಗ

ಬೆಂಗಳೂರು:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ  ಅಜ್ಜಿಕುಟ್ಟಿರ.ಎಸ್ ಪೊನ್ನಣ್ಣ ನವರ ನೇತೃತ್ವದಲ್ಲಿ ಕೊಡಗಿನ ಕಾಂಗ್ರೆಸ್ ನಾಯಕರುಗಳ ನಿಯೋಗವು ಹಲವು ಬೇಡಿಕೆಗಳೊಂದಿಗೆ ಮುಜುರಾಯಿ ಹಾಗೂ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಪ್ರಮುಖವಾಗಿ ಕೊಡಗಿನ ದೇವಸ್ಥಾನಗಳ ಅಭಿವೃದ್ಧಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಹೊಸ ಬಸ್ ಮಾರ್ಗಗಳನ್ನು ನೀಡುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಲಾಯಿತು.ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದರು.

ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಾನಂಡ ಪ್ರತ್ಯು, ದೇವಸ್ಥಾನದ ಅಧ್ಯಕ್ಷರಾದ ಅದೇಂಗಡ ವಾಸು ಬೆಳ್ಳಿಯಪ್ಪ, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯ ಅದೇಂಗಡ ವಿನು ಉತ್ತಪ್ಪ ಇದ್ದರು.