ಕೊಡಗಿನ ಎಸ್.ಪಿ ಸೇರಿ ಮೂವರಿಗೆ ಡಿಜಿ ಮತ್ತು ಐಜಿಪಿ ನೀಡುವ ಪ್ರತಿಷ್ಠಿತ ಪ್ರಶಸ್ತಿ
ಮಡಿಕೇರಿ:ಕನಾ೯ಟಕ ಪೊಲೀಸ್ ಡಿಜಿ ಮತ್ತು ಐಜಿಪಿ ಅವರಿಂದ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಮುದ್ದು ಮಹದೇವ, ವಿಶೇಷ ಮಕ್ಕಳ ಘಟಕಲ್ಯಾಣಾಧಿಕಾರಿ ಮತ್ತು ಹೆಡ್ ಕಾನ್ಸಟೇಬಲ್, ಸುಮತಿ ಅವರು ಭಾಜನರಾಗಿದ್ದಾರೆ.ಅತ್ಯುತ್ತಮ ಕತ೯ವ್ಯ ನಿವ೯ಹಣೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳಿಂದ ನೀಡಲ್ಪಡುವ ಪ್ರಶಸ್ತಿಗೆ. ಇದೇ ಮೊದಲ ಬಾರಿಗೆ ಕೊಡಗಿನ ಪೊಲೀಸ್ ಅಧಿಕಾರಿಗಳಯ ಭಾಗಿಯಾಗಿದ್ದು, ರಾಜ್ಯದಲ್ಲಿ ಅತ್ಯುತ್ತಮ ಕಾಯ೯ನಿವ೯ಹಣೆ ಮಾಡಿರುವ ಪೊಲೀಸರಿಗೆ ಪ್ರೋತ್ಸಾಹ ನೀಡಲು ಉನ್ನತಾಧಿಕಾರಿಗಳು ಪ್ರಶಸ್ತಿ ಸ್ಥಾಪಿಸಿದ್ದು,ನಾಳೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
