ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ ಸೋಮಶೇಖರ್ ಗೆ ಬೀಳ್ಕೊಡುಗೆ

ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ ಸೋಮಶೇಖರ್ ಗೆ ಬೀಳ್ಕೊಡುಗೆ

ಶನಿವಾರಸಂತೆ: ಕೊಡಗು ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ಆಲೂರು ಸಿದ್ದಾಪುರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸಿ. ಟಿ ಸೋಮಶೇಖರ್ ವಯೋನಿವೃತ್ತಿ ಹೊಂದಿರುವ ಪ್ರಯುಕ್ತ, ಮಂಗಳವಾರ ಆಲೂರು ಸಿದ್ದಾಪುರ ಪ್ರೌಢ ಶಾಲಾ ಸಭಾಂಗಣದಲ್ಲಿ ಜಿಲ್ಲಾ ಶಿಕ್ಷಕರ ಸಂಘ, ಹಾಗೂ ಸೋಮಶೇಖರ್ ಅಭಿಮಾನಿ ಬಳಗ ಮತ್ತು ಆಲೂರು ಸಿದ್ದಾಪುರ ಪ್ರೌಢ ಶಾಲಾ ವತಿಯಿಂದ ಆಯೋಜನೆ ಮಾಡಿದ್ದ ಬೀಳ್ಕೊಡುಗೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ ಶಿಕ್ಷಣ ಇಲಾಖೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಸೋಮಶೇಖರ್.ಶಿಕ್ಷಕರನ್ನು ಒಟ್ಟುಗೂಡಿಸಿ ಕೆಲಸ ಮಾಡುತ್ತಿದರು. ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡುವುದು ಸುಲಭದ ಕೆಲಸವಲ್ಲ.ಅದನ್ನು ಉತ್ತಮ ರೀತಿಯಲ್ಲಿ ಮಾಡಿದ್ದಾರೆ. ನಮ್ಮ ಇಲಾಖೆ ನೀಡುವ ಕೆಲಸವನ್ನು ಯಾವುದೇ ಯೋಚನೆ ಮಾಡದೇ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.ವಿವಿಧ ಭಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ.ಆಯಾ ಭಾಗದಲ್ಲಿ ಉತ್ತಮ ಜನಮನ್ನಣೆ ಹಾಗೂ ಮಕ್ಕಳ ಪ್ರೀತಿಗಳಿಸಿದ್ದಾರೆ.ಇಂತಹ ಶಿಕ್ಷಕರು ಹೆಚ್ಚು ಹೆಚ್ಚು ಬರಬೇಕು ಎಂದರು.

ಕೊಡಗು ಜಿಲ್ಲಾ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ್ ಮಾತನಾಡಿ ಶಿಕ್ಷಕರ ಪರವಾಗಿ ಅನೇಕ ಹೋರಾಟ ಮಾಡಿದ ವ್ಯಕ್ತಿ ಸೋಮಶೇಖರ್. ಕೊಡಗಿನಲ್ಲಿ ರಾಜ್ಯ ಮಟ್ಟದ ಸೈಕ್ಷಣಿಕ ಸಮ್ಮೇಳನ ಮಡಿಕೇರಿಯಲ್ಲಿ ನಡೆದಾಗ ಅನೇಕ ಗಣ್ಯರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾಗಿದ್ದರು.ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಸ್ಪಂದನೆ ನೀಡುತಿದ್ದ ವ್ಯಕ್ತಿತ್ವದ ಒಡೆಯ. ಜಿಲ್ಲೆಯ ಮೂಲೆ ಮೂಲೆಯ ಎಲ್ಲಾ ಶಿಕ್ಷಕರ ಸಹಕಾರದಿಂದ ಅತ್ಯುತ್ತಮ ಕೆಲಸ ನಿರ್ವಹಿಸಿದ್ದಾರೆ, ರಾಜ್ಯ ಸಂಘದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಹಾಗೂ ಜನಪ್ರತಿನಿಧಿನಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದರು.

ನಿಕಟ ಪೂರ್ವ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಮಂಜುನಾಥ್ ಮಾತನಾಡಿ ಕೇಂದ್ರ ಸಂಘಕ್ಕೆ ಅನೇಕ ರೀತಿಯ ಸಹಕಾರ ನೀಡಿದವರು ಸೋಮಶೇಖರ್. ಉತ್ತಮ ಸಂಘಟಕರಾಗಿದ್ದು, ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನುಗಿದ್ದರು.ಎಲ್ಲೂ ಕಪ್ಪು ಚುಕ್ಕೆ ಯಾಗದ ರೀತಿ ಕೆಲಸ ಮಾಡಿದ್ದಾರೆ. ಸಮಾಜಮುಖಿ ಕೆಲಸವನ್ನು ಸಹ ಮಾಡುತ್ತ ಜನಮನ್ನಣೆ ಗಳಿಸಿದ್ದಾರೆ ಎಂದರು.

ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ದೇವರಾಜ್ ಗೌಡ ಮಾತನಾಡಿ ಉತ್ತಮ ಜನಮನ್ನಣೆ ಗಳಿಸಿದ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ್.ನಿವೃತ್ತಿ ನಂತರವು ತಮ್ಮನ್ನು ತಾವು ಬೇರೆಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ ಎಂದರು.

 ಹಾಸನ ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿ ಸುದೀರ್ಘ ಸಮಯವನ್ನು ನಮ್ಮ ಸಂಘಟನೆಗೆ ನೀಡಿದ ಅಧ್ಯಕ್ಷರು ಸೋಮಶೇಖರ್.ಎಲ್ಲಾ ಶಿಕ್ಷರಿಗೆ ಹಾಗೂ ಶಿಕ್ಷಕರ ಸಂಘದ ವಿವಿಧ ಜಿಲ್ಲಾ ಅಧ್ಯಕ್ಷರುಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಇನ್ನಷ್ಟು ಸಹಕಾರ ಇದೆ ರೀತಿ ಮುಂದುವರಿಯಲಿ ಎಂದರು.

 ಕೊಡಗು ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷರ ಪಿಲಿಪಾಸ್ ಮಾತನಾಡಿ ಸಂಘಟನೆಯಿಂದ ನಾವು ಸಂಪಾದನೆ ಮಾಡಿದ್ದೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿನಗಳ ಸಂಪಾದನೆ ಆಗಿದ್ದು ಬಿಟ್ಟರೆ ಬೇರೆ ಏನು ಸಂಪಾದನೆ ಮಾಡಲು ಸಾಧ್ಯವಿಲ್ಲ.ಆದರೆ ನೆಮ್ಮದಿ ಸಿಗುತ್ತದೆ. ನಮಗೆ ಯಾರನ್ನು ಮೆಚ್ಚಿಸಲು ಸಾಧ್ಯವಿಲ್ಲ,ಆಗೆಂದು ನಾವು ಮಾಡುವ ಕೆಲಸ ಬಿಡಬಾರದು, ಮೆಚ್ಚುಗೆಗಾಗಿ ಯಾವುದೇ ಕೆಲಸ ಮಾಡಬೇಡಿ ಎಂದರು.ಕೂಡಿಗೆ ಡಯಟ್ ಹಿರಿಯ ಉಪನ್ಯಾಸಕಿ ಪುಷ್ಪ ಮಾತನಾಡಿ ಸೋಮಶೇಖರ್ ಉತ್ತಮ ಜನಮನ್ನಣೆಗಳಿಸಿದ್ದರು.ಇದೇ ಮಾರ್ಗದರ್ಶನ ಮುಂದುವರಿಯಲಿ. ಶಿಕ್ಷಣ ಇಲಾಖೆಗೆ ಇವರ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದರು.

ಕನ್ನಡ ಸಿರಿ ಬಳಗದ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ಕೊಡಗಿನಲ್ಲಿ ಅನೇಕ ಶಿಕ್ಷಕರು ಸಾಹಿತಿಗಳಿದ್ದಾರೆ.ಅವರನ್ನು ಅನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ಅವರು ಯಾವುದೇ ಯೋಚನೆ ಮಾಡದೇ ಕಾರ್ಯಕ್ರಮಗಳಿಗೆ ಬರುತ್ತಾರೆ ಅದಕ್ಕೆ ಕಾರಣಿಕರ್ತರು ಸೋಮಶೇಖರ್.ಇಂತಹ ಶಿಕ್ಷಕರು ಮುಂದೆಯು ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಡ್ಯ ತಾಲೂಕು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕ ಸ್ವಾಮಿ ಮಾತನಾಡಿ ನಿವೃತ್ತಿ ನಂತರವು ಸೈಕ್ಷಣಿಕ ಮಾರ್ಗದರ್ಶನ ಸಿಗಲಿ ಎಂದರು.

  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶೋಭಾ ಶೋಮಶೇಖರ್, ಶಿಕ್ಷಕ ಹಂಡ್ರರಂಗಿ ನಾಗರಾಜ್,ನಿಕಟ ಪೂರ್ವ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಹೆಚ್. ಕೆ. ಮಂಜುನಾಥ್, ಆಲೂರು ಸಿದ್ದಾಪುರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಪ್ರೌಢ ಶಾಲಾ ಸಹ ಶಿಕ್ಷಕರ ರಾಜ್ಯ ಸಂಘಟನಾ ಕಾರ್ಯದರ್ಶಿ ದೇವರಾಜ್ ಗೌಡ, ಬೆಂಗಳೂರು ನಗರದ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತ್ ರಾಯ್, ಹಾಸನ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಪಿಲಿಪ್ ಪಾಸ್, ಆಲೂರು ಸಿದ್ದಾಪುರ ಪ್ರೌಢ ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ, ಗೀತಾ, ಕುಡಿಗೆ ಡಯಟ್ ನ ಹಿರಿಯ ಉಪನ್ಯಾಸಕಿ ಪುಷ್ಪ ಆಲೂರು ಗ್ರಾಮ ಪಂಚಾಯತ್ ಸದಸ್ಯ ಸತೀಶ್,ಮಂಡ್ಯ ಜಿಲ್ಲಾ ನಿವೃತ ಕ್ಷೇತ್ರ ಶಿಕ್ಷಣಧಿಕಾರಿ ಚಿಕ್ಕ ಸ್ವಾಮಿ, ಕೆ. ಪಿ ಜಯಕುಮಾರ್, ಟಿ. ಜಿ. ಪ್ರೇಮ್ ಕುಮಾರ್ ಮುಂತಾದವರಿದ್ದರು.