ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ದ್ವಿತೀಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಯುನೈಟೆಡ್ ಎಫ್.ಸಿ ಕುಂಜಿಲ ತಂಡಕ್ಕೆ ಗೆಲುವು

ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ದ್ವಿತೀಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಯುನೈಟೆಡ್ ಎಫ್.ಸಿ ಕುಂಜಿಲ ತಂಡಕ್ಕೆ ಗೆಲುವು
ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ದ್ವಿತೀಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಯುನೈಟೆಡ್ ಎಫ್.ಸಿ ಕುಂಜಿಲ ತಂಡಕ್ಕೆ ಗೆಲುವು

ಮಡಿಕೇರಿ: ಅಮ್ಮತ್ತಿಯಲ್ಲಿ ನಡೆಯುತ್ತಿರುವ ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯದ ದ್ವಿತೀಯ ಕ್ವಾಟರ್ ಫೈನಲ್ ಪಂದ್ಯದಲ್ಲಿ ಯುನೈಟೆಡ್ ಎಫ್‌ಸಿ ಕುಂಜಿಲ ತಂಡವು ಕ್ವಾಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದೆ.ದ್ವಿತೀಯ ಕ್ವಾಟರ್ ಫೈನಲ್ ಪಂದ್ಯವು ಕಿಪ್ಸ್ಟಾ ಮೂರ್ನಾಡು ಹಾಗೂ ಯುನೈಟೆಡ್ ಎಫ್.ಸಿ ತಂಡಗಳ ನಡುವೆ ನಡೆಯಿತು.ಆದರೆ ಎರಡು ತಂಡಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿದರು ಕೂಡ ಯಾವುದೇ ಗೋಲು ದಾಖಲಿಸಲು ಸಫಲರಾಗಿಲ್ಲ.ಪೆನಾಲ್ಟಿ ಶೂಟೌಟ್ ನಲ್ಲಿ ಯುನೈಟೆಡ್ ಎಫ್.ಸಿ ಕುಂಜಿಲ ತಂಡವು 5-4 ಗೋಲುಗಳ ಅಂತರದಿಂದ ಗೆದ್ದು ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದೆ.ಯುನೈಟೆಡ್ ತಂಡದ ಅನೀಸ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.