ಕೊಡಗು ಮುಸ್ಲಿಮ್ ಕಪ್ ಫುಟ್ಬಾಲ್ ಸೌಹಾರ್ದ ಪಂದ್ಯ: ಮಿಲನ್ಸ್ ಎಫ್.ಸಿ ತಂಡಕ್ಕೆ ಗೆಲುವು

ಕೊಡಗು ಮುಸ್ಲಿಮ್ ಕಪ್ ಫುಟ್ಬಾಲ್ ಸೌಹಾರ್ದ ಪಂದ್ಯ: ಮಿಲನ್ಸ್ ಎಫ್.ಸಿ ತಂಡಕ್ಕೆ ಗೆಲುವು

ಮಡಿಕೇರಿ: ಅಮ್ಮತ್ತಿಯಲ್ಲಿ ನಡೆದ ಕೊಡಗು ಜಿಲ್ಲಾ‌ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಮ್ಮತ್ತಿಯ ಪ್ರತಿಷ್ಠಿತ ಮಿಲನ್ಸ್ ಫುಟ್ಬಾಲ್ ಕ್ಲಬ್ ಹಾಗೂ ಚೌಡೇಶ್ವರಿ ಅಮ್ಮತ್ತಿ ತಂಡಗಳ ನಡುವೆ ಸೌಹಾರ್ದ ಪಂದ್ಯ ನಡೆಯಿತು.ಎರಡು ತಂಡಗಳು 1-1 ಗೋಲುಗಳನ್ನು ದಾಖಲಿಸಿ ಪಂದ್ಯವನ್ನು ಸಮಬಲಗೊಳಿಸಿದರು.ಅಂತಿಮವಾಗಿ ಮಿಲನ್ಸ್ ಎಫ್.ಸಿ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ದಾಖಲಿಸಿ,ಸೌಹಾರ್ದ ಕಪ್ ಪ್ರಶಸ್ತಿ ಪಡೆದರು.